ಉಡುಪಿ, ಮೇ13(Daijiworld News/SS): ಬಸ್ ಅಪಘಾತದಲ್ಲಿ ತನ್ನ ಬಲಗೈಯನ್ನೇ ಕಳೆದುಕೊಂಡ ವಿದ್ಯಾರ್ಥಿಯೋರ್ವನ ಕೃತಕ ಕೈಜೋಡಣೆಯ ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಎಂಜಿಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಜಿತ್ ಶೆಟ್ಟಿ ಅಪಘಾತದಲ್ಲಿ ಕೈ ಕಳೆದುಕೊಂಡಿರುವ ವಿದ್ಯಾರ್ಥಿ. ಇದೀಗ ಈ ವಿದ್ಯಾರ್ಥಿಗೆ ಕೃತಕ ಕೈಜೋಡಣೆಯ ಅವಶ್ಯಕತೆಯಿದ್ದು, ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಜಿತ್ ತನ್ನ ಬಲಗೈಯನ್ನು ಕಳೆದುಕೊಂಡಿದ್ದಾರೆ. ಅಜಿತ್ಗೆ ಕೃತಕ ಕೈಜೋಡಣೆ ಮಾಡುವ ಉದ್ದೇಶದಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ತೀರಾ ಬಡ ಕುಟುಂಬದಿಂದ ಬಂದಿರುವ ಅಜಿತ್ ಚಿಕಿತ್ಸೆಗೆ ಮನೆಯವರು ಹಾಗೂ ಗೆಳೆಯರು ಈಗಾಗಲೇ ಸಾಕಷ್ಟೂ ಹಣವನ್ನು ಖರ್ಚು ಮಾಡಿದ್ದಾರೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ವಿದ್ಯಾರ್ಥಿ ಅಜಿತ್ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರು ಈ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು ಎಂದು ಅಜಿತ್ ಕುಟುಂಬ ಹಾಗೂ ಗೆಳೆಯರು ಮನವಿ ಮಾಡಿದ್ದಾರೆ.
ಅಜಿತ್ ಶೆಟ್ಟಿ
ಸಿಂಡಿಕೇಟ್ ಬ್ಯಾಂಕ್ ಹಿರಿಯಡ್ಕ ಶಾಖೆ,
ಎಸ್ಬಿ ಅಕೌಂಟ್ ನಂಬರ್ 01482200088432
ಐಎಫ್ಎಸ್ಸಿ ಕೋಡ್ -ಎಸ್ವೈಎನ್ಬಿ0000148
ಮನೆ ವಿಳಾಸ - ಬಾಕ್ಯರ್ಕಟ್ಟ ಹೌಸ್, ಅಂಜಾರು ಗ್ರಾಮ, ಹಿರಿಯಡ್ಕ
ಘಟನೆಯ ವಿವರ - ಹಿರಿಯಡ್ಕ ಅಂಜಾರು ನಿವಾಸಿ ಅಜಿತ್ ಶೆಟ್ಟಿ ಪರೀಕ್ಷೆ ಹಿನ್ನೆಲೆಯಲ್ಲಿ ಮೇ 6ರಂದು ಕಾಲೇಜಿಗೆ ಬಂದು ಓದು ಮುಗಿಸಿ ಮನೆಗೆ ಬಸ್ನಲ್ಲಿ ಹೊರಟಿದ್ದರು. ಈ ವೇಳೆ ಪರ್ಕಳ ಬಳಿ ಎದುರಿನಿಂದ ಬರುತ್ತಿದ್ದ ಬಸ್ ಅಜಿತ್ ಪ್ರಯಾಣಿಸುತ್ತಿದ್ದ ಬಸ್ಗೆ ಢಿಕ್ಕಿ ಹೊಡೆಯಿತು. ಪರಿಣಾಮ, ಕಿಟಕಿ ಬದಿ ಕುಳಿತಿದ್ದ ಅಜಿತ್ ತಮ್ಮ ಬಲಗೈ ಕಳೆದುಕೊಂಡಿದ್ದಾರೆ.