ಕುಂದಾಪುರ, ಜೂ. 18(DaijiworldNews/AK):ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಯಿಂದ ನಾಲ್ಕು ಬೇಡಿಕೆಗಳು ಬಂದಿವೆ. ಅದರಲ್ಲಿ ಒಂದು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯ ಜೊತೆ ವಿಲೀನಗೊಳಿಸುವುದು. ಕುಂದಾಪುರದಲ್ಲಿ ಹೊಸ ರೈಲುಗಳನ್ನು ನಿಲುಗಡೆಗೊಳಿಸುವಂಥದ್ದು. ಕುಂದಾಪುರ ಮತ್ತು ಬೆಂಗಳೂರು ಸಂಚಾರದ ರೈಲ್ವೆಯಗಳನ್ನು ಪಡೆಯಲು ಬೈಪಾಸ್ ಮೂಲಕ ಹೊಸ ರೈಲುಗಳನ್ನು ಬಿಡುಗಡೆಗೊಳಿಸಬೇಕು. ತಿರುಪತಿ ಮತ್ತು ವಾರಣಾಸಿಗೆ ಹೊಸ ರೈಲು ಆರಂಭಿಸಬೇಕು. ರೈಲು ಮಾರ್ಗಗಳ ಅವಧಿಯನ್ನು ವಿಸ್ತರಣೆ ಮಾಡಬೇಕು ಏನು ಅಂತ ಬೇಡಿಕೆಗಳನ್ನು ಇಟ್ಟಿದ್ದು ಹೊಸ ಸಂಸದನಾಗಿ ನಾನು ಈ ಬೇಡಿಕೆಗಳಿಗೆ ಪ್ರಥಮ ಆದ್ಯತೆಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕುಂದಾಪುರದ ರೈಲ್ವೆ ನಿಲ್ದಾಣವನ್ನು ಉನ್ನತೀಕರಣಗೊಳಿಸುವುದರ ಜೊತೆಗೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಪ್ರಯತ್ನ ಪಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಲು ಇಷ್ಟಪಡುತ್ತೇನೆ. ಜಿಲ್ಲಾಧಿಕಾರಿಗಳನ್ನು ಕರೆದು ಈ ಬಗ್ಗೆ ಮಾತನಾಡಿದ್ದೇನೆ. ಎರಡು ದಿನಗಳ ಒಳಗೆ ಭೇಟಿ ನೀಡಲಾಗುವುದು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಸಂಪರ್ಕ ರಸ್ತೆಗಳು ಒಟ್ಟಾಗಿರುವುದರಿಂದ ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದರು
ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಪೆಟ್ರೋಲ್ ನ ಬೆಲೆ ಏರಿಕೆ ಆಗಿತ್ತು. ಆ ಸಂದರ್ಭ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ವಾಹನಕ್ಕೆ ಹಗ್ಗ ಕಟ್ಟಿಕೊಂಡು ಬೆಳೆಯುವ ರೀತಿಯ ಚಿತ್ರವನ್ನು ಹಾಕಿದ್ದರು ಹಾಗಾಗಿ ಈಗ ಅವರ ಸರ್ಕಾರ ಪೆಟ್ರೋಲ್ ನ ಬೆಲೆ ಏರಿಸಬಾರದಿತ್ತು. ಇದು ಸಂಪೂರ್ಣವಾಗಿ ಜನವಿರೋಧಿ ನೀತಿ ಯಾಕೆಂದರೆ ಈ ಹಂತದಲ್ಲಿ ದಿಡೀರ್ ಆಗಿ ಮೂರು ಮೂರುವರೆ ರೂಪಾಯಿ ಏರಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮುಖ್ಯಮಂತ್ರಿಗಳು ಎಷ್ಟೇ ಸಮರ್ಥನೆ ಮಾಡಿಕೊಂಡು ಕೊಂಡರೂ ಕೂಡ ಜನಸಾಮಾನ್ಯರಿಗೆ ಬಹುದೊಡ್ಡ ಹೊಡೆತ ಆಗಿದೆ ಇದನ್ನು ವಿರೋಧಿಸಿ ನಾವು ರಾಜ್ಯದಾದ್ಯಂತ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡರು ಈಗಾಗಲೇ ಹೇಳಿಕೆ ನೀಡಿದ್ದು ಚುನಾವಣೆ ಬಂತು ಎಂಬ ಕಾರಣಕ್ಕೆ ಬೆಲೆ ಏರಿಕೆ ಮಾಡಿಲ್ಲ ಚುನಾವಣೆ ಮುಗಿದಿದೆ ಎನ್ನುವ ಕಾರಣಕ್ಕೆ ಮಾಡ್ತಾ ಇದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ ಹಾಗಾಗಿ ಚುನಾವಣಾ ಕಾರಣಗಳನ್ನು ಇಟ್ಟುಕೊಂಡು ಚುನಾವಣೆ ಮುಗಿದ ಬಳಿಕ ಬೆಲೆ ಏರಿಕೆ ಮಾಡಿರುವುದು ಸ್ಪಷ್ಟವಾಗಿದೆ ಎಂದರು
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಕೋಟ ಕಾನೂನು ಎಲ್ಲರಿಗೂ ಒಂದೇ . ಇಲ್ಲಿ ಯಾರು ದೊಡ್ಡವರಿಲ್ಲ ಸಣ್ಣವರಿಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು