ಬಂಟ್ವಾಳ, ಜೂ 15 (DaijiworldNews/MS): ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಸೀದಿಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಹೋಬಳಿ ಜಮಾಅತ್ ಒಕ್ಕೂಟ ವತಿಯಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರಿಗೆ ಮನವಿ ಮಾಡಲಾಯಿತು.
ಬಳಿಕ ಪರಿಯಾಲ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಎಂ ಎಸ್ ಮಹಮ್ಮದ್ ಅವರು ಮಾತನಾಡಿ ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾಧ್ಯಮದವರ ಜತೆ ಮಾತನಾಡುವ ವೇಳೆ ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಡಲಾಗಿದೆ. ಇಂತಹ ಮಸೀದಿಗಳಿಗೆ ದಾಳಿ ನಡೆಸಬೇಕು ಎಂದು ಹೇಳಿಕೆ ನೀಡಿದ್ದು, ಖಂಡನೀಯವಾಗಿದೆ ಎಂದರು.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಪ್ ಮಹಮ್ಮದ್ ಪೊನ್ನೋಟ್ಟು ಅವರು ಮಾತನಾಡಿ ಮಸೀದಿಯೂ ಶಾಂತಿಯನ್ನು ಕಲಿಸುವ ಕೇಂದ್ರವಾಗಿದೆ. ಪೊಲೀಸ್ ಇಲಾಖೆ ಇಲ್ಲಿಗೆ ಬಂದು ಪರಿಶೀಲನೆ ನಡೆಸಬಹುದು. ಹರೀಶ್ ಪೂಂಜ ಹೇಳಿಕೆ ಶುದ್ಧ ಸುಳ್ಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪರ್ತಿಪ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕೀಂ ಪಿ.ಎಂ, ಉಪಾಧ್ಯಕ್ಷರಾದ ಕೆ.ಎಂ ಲತೀಫ್ ಪರ್ತಿಪ್ಪಾಡಿ, ಕಡಂಬು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಕುಡ್ತಮುಗೇರು ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್, ಉಕ್ಕುಡ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಟಿ.ಎಂ.ಎ, ಕಾನತ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಕಾನತ್ತಡ್ಕ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ವಿಕೆಎಂ ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಕೆಲಿಂಜ ಜುಮಾ ಮಸೀದಿಯ ಅಬ್ಬಾಸ್ ಕೆಲಿಂಜ, ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯ ಮಜೀದ್ ಕನ್ಯಾನ, ಹಸೈನಾರ್ ಸೆಟ್ಟಿಬೆಟ್ಟು ,ಹಮೀದ್ ಕುಕ್ಕಾಜೆ , ಶರಪುದ್ದೀನ್ ಕುಕ್ಕಾಜೆ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಕರೀಮ್ ಕುದ್ದುಪದವು, ವಿಕೆಎಂ ಹಂಝ, ಅಝೀಝ್ ಸನ, ಶಮೀರ್ ಪಳಿಕೆ ವಿ.ಎಸ್ ಇಬ್ರಾಹಿಂ,ಉಪಸ್ಥಿತರಿದ್ದರು.