ಮಂಗಳೂರು, ಜೂ 14(DaijiworldNews/ Ak): ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ನಾಳೆ ನಡೆಯುವ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.
ಡಾ.ರೊನಾಲ್ಡ್ ಕೊಲಾಸೊ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ಡಾ.ರೊನಾಲ್ಡ್ ದಿವಂಗತ ಫ್ಯಾಬಿಯನ್ ಬಿ.ಎಲ್.ಕೊಲಾಸೊ ಮತ್ತು ಆಲಿಸ್ ಕೊಲಾಸೊ ಅವರ ಸುಪುತ್ರ. ಅವರ ಧರ್ಮಪತ್ನಿ ಜೀನ್ ಕೊಲಾಸೊ. ಡಾ. ಕೊಲಾಸೊರಿಗೆ ನೈಗೆಲ್ ರುಫುಸ್ ಕೊಲಾಸೊ ಹಾಗೂ ರಾಂಡಲ್ ಶಾನ್ ಕೊಲಾಸೊ ಇಬ್ಬರು ಮಕ್ಕಳು.
ಅಂದಹಾಗೇ ರೊನಾಲ್ಡ್ ಕೊಲಾಸೊ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಕಾನೂನುನಲ್ಲಿ ಪ್ರಥಮ ರ್ಯಾಂಕ್ ಪಡೆದ ಪದವಿ ಪಡೆದರು. ಬಳಿಕ ಅವರು ಅಥೆನ್ಸ್ ನ ಇಂಟರ್ ನ್ಯಾಶನಲ್ ಕೋಸ್ಟ್ ಅಕೌಂಟೆಂಟ್ಸ್ ಮತ್ತು ಮ್ಯಾನೇಜ್ ಮೆಂಟ್ ಅಕೌಂಟೆಂಟ್ಸ್ (ಐಸಿಎಎಂಎ) ನಿಂದ ಕೋಸ್ಟ್ ಕಂಟ್ರೋಲ್ ಮತ್ತು ಕೋಸ್ಟ್ ಮಾನಿಟರಿಂಗ್ ನಲ್ಲಿ ಪರಿಣತಿ ಪಡೆದರು.
ಬಳಿಕ ಮೊದಲು ಡಾ.ರೊನಾಲ್ಡ್ ಕೊಲಾಸೊ ವೃತ್ತಿರಂಗಕ್ಕೆ ಹೆಜ್ಜೆ ಇಟ್ಟರು. 1975ರಲ್ಲಿ ಒಮಾನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಬದುಕನ್ನು ಆರಂಭಿಸಿದರು. ಅವರ ವೃತ್ತಿ ನಿಷ್ಠೆಯನ್ನು ನೋಡಿದ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆಗಿ ದೊಡ್ಡ ಜವಾಬ್ದಾರಿಯನ್ನು ನೀಡಿತ್ತು. ಬಳಿಕ ಡಾ. ರೊನಾಡ್ಡ್ ಅವರ ಕೆಲಸವನ್ನು ಮೆಚ್ಚಿದ ಪ್ರಮುಖ ಪೆಟ್ರೋಲಿಯಮ್ ಹಾಗೂ ಗ್ಯಾಸ್ ಯೋಜನೆಗಳು, ಟೌನ್ ಶಿಪ್ ಗಳು ಮತ್ತು ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆ ಉಸ್ತುವಾರಿ ನೀಡಿದರು.
ತಮಗೆ ವಹಿಸಿದ ಪ್ರತಿಯೊಂದು ಹುದ್ದೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ರೊನಾಲ್ಡ್ ಅವರದು . ಉದ್ಯೋಗ, ಉದ್ಯಮದಲ್ಲಿ ಅಪಾರ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ತನ್ನ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸಮಾಜ ಸೇವೆಗೂ ಮುಂದಾದರೂ. ತನ್ನ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಮಾಜದಲ್ಲಿ , ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಜನರ ಸೇವೆಯಲ್ಲಿ ನಿರತರಾದರು. ಅದೆಷ್ಟೋ ಜನರು, ಸಂಸ್ಥೆ, ಸಂಘಟನೆಗಳಿಗೆ ದಾನ ಮಾಡುವ ಸಂಘಟನೆ ಕಟ್ಟುವ ಮೂಲಕ, ಸಲಹೆ ನೀಡಿ ಕೊಲಾಸೋ ನೆರವಿನ ಹಸ್ತ ಚಾಚಿದ್ದಾರೆ.
ಇವರು ಮಂಗಳೂರು, ಕರ್ನಾಟಕ, ಗೋವಾ, ಮಾತ್ರವಲ್ಲದೆ ವಿದೇಶಗಳಲ್ಲೂ ಅದ್ಬುತವಾದ ಸೇವೆಯನ್ನು ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೊನಾಲ್ಡ್ ಅವರ ಸಾಧನೆ ಮತ್ತು ಸಮಾಜ ಸೇವೆಯ ಬೆನ್ನೆಲುಬುರಾಗಿ ನಿಂತವರು ಅವರ ಪತ್ನಿ ಜೀನ್ ಕೊಲಾಸೊ . ಅವರ ಪ್ರತಿಯೊಂದು ಸಾಧನೆ, ಸಮಾಜಸೇವೆ ಹಿಂದೆ ಬೆನ್ನು ತಟ್ಟಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇಷ್ಟೇ ಅಲ್ಲ ರೊನಾಲ್ಡ್ ಅವರು ತನ್ನ ಸಮಾಜ ಸೇವೆ ಮತ್ತು ಉದ್ಯಮರಂಗದಲ್ಲಿ ಕಂಡ ಯಶಸ್ಸು, ಸಾಧನೆಗೆ ಅನೇಕ ಪ್ರಶಸ್ತಿ, ಸಮ್ಮಾನ, ಗೌರವ ಬಿರುದುಗಳು ಪಡೆದು ಅನೇಕರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೋ ಸಾಧನೆ , ಕೀರ್ತಿಯನ್ನು ಪಡೆಯುವ ಮೂಲಕ ರೊನಾಲ್ಡ್ ಮೆಚ್ಚುಗಗೆ ಪಾತ್ರರಾಗಿದ್ದಾರೆ.
ಪರೋಪಕಾರಕ್ಕಾಗಿ 2017ನೇ ವಾರ್ಷಿಕ ಟೈಮ್ಸ್ ನೌ ಗ್ಲೋಬಲ್ ಇಂಡಿಯನ್ ಪ್ರಶಸ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಬಹರೇನ್ ನಲ್ಲಿ 2015ರಲ್ಲಿ ಅಂದಿನ ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂರಿಂದ ‘ಇಂಡಿಯನ್ ಕ್ಲಬ್ ಸೆಂಟಿನರಿ ಅವಾರ್ಡ್, 2018ರ ಅಕ್ಟೋಬರ್ 15ರಂದು ಟೊರಾಂಟೋದ ಸಂಸತ್ ಭವನದಲ್ಲಿ ಕೆನಡಾ ಸರಕಾರದ ಪರವಾಗಿ ಸನ್ಮಾನ. 2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರಿಂದ ‘ವಿಶ್ವ ಕೊಂಕಣಿ ಸಮಾಜ ರತ್ನ’ಬಿರುದು, ಹೀಗೆ ಒಂದ ಎರಡ ಹೇಳಿ ನೂರಾರು ಪ್ರಶಸ್ತಿಗಳು ಇವರ ಸಾಧನೆಗೆ ಒಳಿದಿದೆ.
ಇಷ್ಟೇ ಅಲ್ಲ ಡಾ.ರೊನಾಲ್ಡ್ ಕೊಲಾಸೊ ಅವರ ಸಮಾಜ ಸೇವೆ, ದತ್ತಿ ಹಾಗೂ ಲೋಕೋಪಯೋಗಿ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಒಟ್ಟಾರೆ ಉದ್ಯಮರಂಗದಲ್ಲಿದ್ದ ವೃತ್ತಿ ನಿಷ್ಟೆ, ಸಾಮಾಜಕ್ಕಾಗಿ ನೀಡಿದ ಅನೇಕ ಕೊಡುಗೆ ,ಹೀಗೆ ಸಾಧನೆಯ ಹೆಜ್ಜೆ ಗುರುತು ಮೂಡಿಸಿದ ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ನಮ್ಮದೊಂದು ಸಲಾಂ.