ಮಂಗಳೂರು, ಜೂ 14 (DaijiworldNews/ AK): ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಟಿ ಚುನಾವಣೆ ಸಂಧರ್ಭ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೆ, ಕ್ಷೇತ್ರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಬಗ್ಗೆ ಹೇಳಿದ್ದೆ. ಇದರ ಮೊದಲ ಹಂತದ ಕೆಲಸ ಈಗ ಪೂರ್ಣಗೊಂಡಿದೆ.ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರಿನ ಸಿಂಗಲ್ ಟ್ಯಾಂಕ್ ಆಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ಕೆಲಸ ಆಗಿದೆ. ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ. ಇದಕ್ಕಾಗಿ 386 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದರು.
ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಬರುತ್ತಾರೆ. ಶೀಘ್ರದಲ್ಲೇ ಸಿಎಂ ಇದರ ಉದ್ಘಾಟನೆ ಮಾಡಲಿದ್ದಾರೆ.ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ ಎಂದು ಹೇಳಿದರು.ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ, ಅದರ ಮೇಲೆ ಸರ್ಕಾರದ ಜೊತೆ ಮಾತನಾಡಿ ಕಾರ್ಯ ಟೆಕ್ನಿಕಲ್ ಎಕ್ಸ್ ಪರ್ಟ್ ಜೊತೆ ಚರ್ಚಿಸಿ ಕಡಲ್ಕೊರೆತ ತಡೆ ಕಾರ್ಯ ಸಮುದ್ರ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೆಲಸ ಆದ ಬಳಿಕ ಸರ್ಕಾರ ಅದರ ನಿರ್ವಹಣೆಗೂ ಹಣ ಕೊಡಬೇಕು. ಸಮುದ್ರದಲ್ಲಿ ಮಾಡಿದ ಕಾರ್ಯಕ್ಕೆ ನಿರ್ವಹಣೆ ಅಗತ್ಯ ಇದೆ. ನಾವು ತಾತ್ಕಾಲಿಕ ಕೆಲಸ ಮಾಡಿ ಮನೆಗಳು ನಾಶ ಆಗದಂತೆ ನೋಡಿದ್ದೇವೆ.ಈ ಬಾರಿ ಹೆಚ್ಚು ಅಪಾಯ ಇರೋ ಜಾಗಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಉಚ್ಚಿಲದ ಬಟ್ಟಪಾಡಿ ಕಡಲ ತೀರ ರಕ್ಷಣೆಯ ಕೆಲಸ ಆಗಬೇಕಿದೆ. ಇದಕ್ಕಾಗಿ ಎನ್ ಐಟಿಕೆ ಅಧ್ಯಯನ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಬಾಂಬೆ ಟು ಕೊಚ್ಚಿ ಹೋಗುವ ಕ್ರೂಸ್ ಗೆ ಮಂಗಳೂರಿನಲ್ಲಿ ವ್ಯವಸ್ಥೆ ಬೇಕಾಗಿದೆ. ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ. ತುಂಬಾ ಒತ್ತಡ ಇದ್ದರೂ ನಾನು ಎಲ್ಲ ಅಕ್ರಮ ಬಂದ್ ಮಾಡಿಸಿದೆ. ನಾನು ಸಚಿವ ಆಗಿದ್ದಾಗ ಎಲ್ಲವೂ ಸಂಪೂರ್ಣ ಬಂದ್ ಆಗಿತ್ತು ಆದರೆ ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ.ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ, ಯಾವುದೇ ಅಕ್ರಮ ಇಲ್ಲ ಉಳಿದಂತೆ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡೋದು.ನಾನು ಅಧಿಕಾರ ಇದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ ಎಂದರು.
ಹಿಂದಿನ ಉಸ್ತುವಾರಿ ಸಚಿವರು ಎಷ್ಟು ಬಾರಿ ಮಂಗಳೂರಿನಲ್ಲಿ ಸಭೆ ಮಾಡಿದ್ದಾರೆ.ಈಗಿನ ಸಚಿವರು ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಸಭೆ ಮಾಡ್ತಾರೆ. ಹಿಂದಿನ ಸಚಿವರು ಯಾರ ಕೈಗಾದ್ರೂ ಸಿಗ್ತಾ ಇದ್ರಾ ಎಂದು ಖಾದರ್ ಪ್ರಶ್ನಿಸಿದರು.