ಮಂಗಳೂರು,ಮೇ13(DaijiworldNews/AZM): ಮಂಗಳೂರಿನಲ್ಲಿ ತೀವ್ರ ನೀರಿನ ಅಭಾವ ತಲೆದೋರಿದ್ದು, ಈ ಹಿನ್ನಲೆ ತುಂಬೆ ವೆಂಟೆಡ್ ಡ್ಯಾಂನಿಂದ ಪೂರೈಕೆಯಾಗುವ ರೇಷನಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮಂಗಳೂರಿಗರಿಗೆ ಇಂದಿನಿಂದ ಮೂರು ದಿನಗಳ ನೀರಿನ ಪೂರೈಕೆ ಇರುವುದಿಲ್ಲ.
ಹೊಸ ರೇಷನಿಂಗ್ ವ್ಯವಸ್ಥೆಯ ಪ್ರಕಾರ, ನಾಲ್ಕು ದಿನ ನೀರು ಪೂರೈಕೆಯಾದರೆ, ಮೂರು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಈ ಹಿಂದೆ ನಾಲ್ಕು ದಿನ ನೀರು ಪೂರೈಕೆಯಾದರೆ 2 ದಿನ ಮಾತ್ರ ಪೂರೈಕೆ ಸ್ಥಗಿತಗೊಳಿಸಲಾಗುತ್ತಿತ್ತು. ಮುಂಗಾರು ಪೂರ್ವ ಮಳೆಯಾಗದ ಕಾರಣ ಹಾಗೂ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮತ್ತಷ್ಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಈ ಕ್ರಮಕೈಗೊಂಡಿದೆ.