ಮಂಗಳೂರು, ಜೂ. 12(DaijiworldNews/AK): ಬೋಳಿಯಾರ್ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಮತ್ತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಆರೋಪಿ ತಾಜುದ್ದಿನ್, ಸರ್ವನ್, ಮುಬಾರಕ್, ಅಶ್ರಫ್, ತಲ್ಲಥ್ ,ಇಮ್ರಾನ್,ಕೋಲಿ ಇರ್ಷಾದ್ ಬಂಧಿತರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆರು ಮಂದಿಯನ್ನು ಬಂಧಿಸಿದ್ದ ಮಂಗಳೂರು ಪೊಲೀಸರು ಇದೀಗಾ ಮತ್ತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಈ ವರೆಗೆ ಪ್ರಕರಣ ಸಂಭವಿಸಿ ಒಟ್ಟು 13 ಮಂದಿಯನ್ನು ಬಂಧಿಸಿದ್ದಾರೆ.ಬಿಜೆಪಿ ಕಾರ್ಯಕರ್ತರಾದ ಹರೀಶ್ ಧರ್ಮ ನಗರ ಮತ್ತು ನಂದನ್ ಗೆ ಚೂರಿ ಇರಿಯಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಹರೀಶ್ ಮತ್ತು ನಂದನ್ ಚಿಕಿತ್ಸೆ ಪಡೆಯುತ್ತಿದ್ದಾರೆ.