ಮಂಗಳೂರು, ಜೂ. 10(DaijiworldNews/AA): ಬೋಳಿಯಾರಿನಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪತ್ನಿಯೊಂದಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಪ್ರಮಾಣವಚನದ ವಿಜಯೋತ್ಸವ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತ ಇನೋಳಿ ಧರ್ಮನಗರ ನಿವಾಸಿ ಹರೀಶ್ (35) ಹಾಗೂ ಅವರ ಭಾವ ವಿನೋದ್ (40) ಎಂಬವರ ಮೇಲೆ ತಂಡವೊಂದು ಚೂರಿಯಿಂದ ಇರಿದಿತ್ತು. ಬಳಿಕ ಇವರಿಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.