ಮಂಗಳೂರು, ಜೂ. 08(DaijiworldNews/AA): ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ಯುವತಿಯ ಸಂಬಂಧಿಕರು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ ಬಳ್ಳಾಲ್ ಬಾಗ್ ಎಂಬಲ್ಲಿ ನಡೆದಿದೆ.
ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಇದೇ ವೇಳೆ ಅದೇ ಬಸ್ಸಿನಲ್ಲಿ ಪ್ರಕಾಣಿಸುತ್ತಿದ್ದ ಯುವಕನೋರ್ವ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಯುವತಿ ಈ ವಿಚಾರವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದು, ಸಂಬಂಧಿಕರು ಬಸ್ಸನ್ನು ಬಲ್ಲಾಳ್ ಬಾಗ್ ಎಂಬಲ್ಲಿ ತಡೆದಿದ್ದಾರೆ.
ಬಳಿಕ ಯುವಕನನ್ನು ಬಸ್ ನಿಂದ ಕೆಳಗಿಳಿಸಿದ ಸಂಬಂಧಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯುವಕನಿಗೆ ಧರ್ಮದೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.