ಮಣಿಪಾಲ, ಜೂ. 07(DaijiworldNews/AA): ಮೂವರು ಯುವಕರು ಮಾದಕ ವಸ್ತು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಳ್ಳಿ ಗ್ರಾಮದ ಈಶ್ವರ್ ನಗರದ ಸಾರ್ವಜನಿಕ ಸ್ಥಳದಲ್ಲಿ ಮೇ ೦೫ ರಂದು ಪೋಲಿಸರು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಜೀವಾ(22), ಲಕ್ಷಣ(21) ಮತ್ತು ನಿರ್ಗುಣ (20) ಎಂಬಾತರು ಅಮಲಿನಲ್ಲಿದ್ದು, ಅವರನ್ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಮಣಿಪಾಲದ ಆಸ್ಪತ್ರೆಯೊಂದರ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ವೈದ್ಯರ ತಪಾಸಣೆಯಲ್ಲಿ ಯುವಕರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಯುವಕರು ಗಾಂಜಾ ಸೇವನೆ ಮಾಡಿರುವ ಹಿನ್ನೆಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 137, 138, 139ರಂತೆ ಹಾಗೂ 27(ಬಿ) ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.