ಕಾಸರಗೋಡು, ಜೂ. 06(DaijiworldNews/AK): ಕಾರಡ್ಕ ಕೃಷಿ ಸಹಕಾರಿ ಸಂಸ್ಥೆ ಯಲ್ಲಿ ಸುಮಾರು 4.76 ಕೋಟಿ ರೂ . ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ತನಿಖಾ ತಂಡ ಬಂಧಿಸಿದೆ.
ಸಂಸ್ಥೆಯ ಕಾರ್ಯದರ್ಶಿ ಕರ್ಮಂತ್ತೋಡಿಯ ಕೆ . ರತೀಶ್ ( 38) ಮತ್ತು ಪಯ್ಯನ್ನೂರಿನ ಎಂ . ಜಬ್ಬಾರ್ ( 51) ಬಂಧಿತರು.ತಮಿಳುನಾಡಿನ ಈರೋಡ್ ಎಂಬಲ್ಲಿನ ವಸತಿ ಗೃಹದಿಂದ ಆದೂರು ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ. ಸಿ ಸಂಜಯ್ ಕುಮಾರ್ ನೇತೃತ್ವ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಹಕಾರಿ ಸಂಸ್ಥೆಯಲ್ಲಿ ಹಗರಣ ಬೆಳಕಿಗೆ ಬಂದ ಬಳಿಕ ಇಬ್ಬರು ತಲೆ ಮರೆಸಿಕೊಂಡಿದ್ದರು.
ಬೆಂಗಳೂರು , ಚಿಕ್ಕಮಗಳೂರು , ಹಾಸನ ,ಶಿವಮೊಗ್ಗ ಮೊದಲಾದೆಡೆ ತಲೆಮರೆಸಿಕೊಂಡಿದ್ದು , ಕರ್ನಾಟಕ ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿರುವುದನ್ನು ಗಮನಿಸಿದ ಇವರು ತಮಿಳುನಾಡಿಗೆ ಪರಾರಿಯಾಗಿದ್ದರು.ಸೇಲಂ, ನಾಮಕಲ್ ಮೊದಲಾದಡೆಯೂ ತಲೆ ಮರೆಸಿಕೊಂಡಿದ್ದರು.ಈರೋಡ್ ನಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು .ಮೊಬೈಲ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯೂ ಆರೋಪಿಗಳ ಸುಳಿವು ಲಭಿಸುವಲ್ಲಿ ಸಹಕಾರಿಯಾಯಿತು.
ಆರೋಪಿಗಳು ಕಾಸರಗೋಡಿನಲ್ಲಿರುವ ಸ್ನೇಹಿತರಿಗೆ ಸಂಪರ್ಕಿಸಿದ್ದು , ಈ ಕರೆಗಳನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸುಳಿವು ಲಭಿಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಈ ಹಿಂದೆ ಕರ್ನಾಟಕದಿಂದ ಬಂಧಿಸಲಾಗಿತ್ತು
ಗ್ರಾಹಕರ ಅರಿವಿಲ್ಲದೆ ಚಿನ್ನಾಭರಣವನ್ನು ಅಡವಿಟ್ಟು ಸುಮಾರು 4.76 ಕೋಟಿ ರೂ . ವಂಚಿಸ ಲಾಗಿತ್ತು. ಮೇ ೧೩ ರಂದು ಆದೂರು ಠಾಣಾ ಪೊಲೀಸರಿಗೆ ಲಭಿಸಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಅವ್ಯವ ಹಾರ ಬೆಳಕಿಗೆ ಬಂದಿತ್ತು