ಉಡುಪಿ, ಜೂ. 06(DaijiworldNews/AK): ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ. ರಾಜ್ಯದ ಬಡವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಹೊರತು ರಾಜಕಾರಣಕ್ಕಾಗಿ ಅಲ್ಲ. ಪಟ್ಟಣ ಪ್ರದೇಶದಲ್ಲಿ ಗ್ಯಾರೆಂಟಿ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಹಳ್ಳಿ, ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗುತ್ತಿದೆ. ಎಂದು ಗೃಹ ಸಚಿವ ಜಿ ಡಾ.ಪರಮೇಶ್ವರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಗ್ಯಾರೆಂಟಿ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡುತ್ತೇವೆ. ರಾಜ್ಯದ ಬಜೆಟ್ ಗಾತ್ರ ಹೀಗ್ಗಿದೆ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಇದೆ. ಹಣಕಾಸು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಎನ್ಡಿಎ 400 ಸೀಟ್ ಬರುತ್ತದೆ ಎಂದು ಅವರು ನಿರೀಕ್ಷಿಸಿದ್ದರು.ಜನ ಬಿಜೆಪಿ NDAಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ. ಎನ್ಡಿಎ ಎಷ್ಟು ಸುಭದ್ರ ಎಂದು ಕಾದು ನೋಡೋಣ.ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ನ ವೋಟ್ ಶೇರ್ ಹೆಚ್ಚಾಗಿದೆ.ಬಿಜೆಪಿಯವರು ನಿರೀಕ್ಷೆ ತಲುಪಿಲ್ಲ, ನಾವು ನಮ್ಮ ನಿರೀಕ್ಷೆಗೂ ತಲುಪಿಲ್ಲ.ರಾಜ್ಯದಲ್ಲಿ 20 - 28 ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು.ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆಗಲಿಲ್ಲವೇ?ಬರೀ ನಮ್ಮ ಬಗ್ಗೆ ಯಾಕೆ ಹೇಳುತ್ತೀರಿ ಅವರ ಬಗ್ಗೆ ಮಾತಾಡಿ ,ಬಿಜೆಪಿಗೆ 240 ಸೀಟು ಅಂದ್ರೆ ಹಿನ್ನಡೆ ಅಲ್ವಾ? ಎಂದು ಪ್ರಶ್ನಿಸಿದರು.
ಭೋವಿ ನಿಗಮದಲ್ಲಿ 100 ಕೋಟಿ ಹಗರಣ:
ಬಿಜೆಪಿ ಸರ್ಕಾರದ ಅವಧಿಯ ಹಗರಣ ಕುರಿತು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ ವಿಚಾರ ಈ ಬಗ್ಗೆ ಯಾರಾದ್ರೂ ನಮಗೆ ದೂರು ಕೊಡಬೇಕು. ಖಂಡಿತವಾಗಿಯೂ ಈ ಬಗ್ಗೆ ತನಿಖೆ ಮಾಡುತ್ತೇವೆ .ಸರ್ಕಾರದ ಅವಧಿಯಲ್ಲಿ ಆಗಿದೆ ಅಂತ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ಗೂಳಿಹಟ್ಟಿ ಶೇಖರ್ ನಮಗೆ ದೂರು ಕೊಟ್ಟರೆ ಸಾಕು ತನಿಖೆ ಮಾಡ್ತೇವೆ ಎಂದು ಪರಮೇಶ್ವರ್ ಹೇಳಿದರು.
ಕರಾವಳಿಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ವಿಚಾರ:
ಕರಾವಳಿಯಲ್ಲಿ ಪಕ್ಷ ಸಂಘಟನೆ ಕೆಲಸ ಆಗಬೇಕು .ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡುತ್ತೇವೆ. ಕರಾವಳಿ ಮೂರು ಜಿಲ್ಲೆಯಲ್ಲಿ ಹೆಚ್ಚಿನ ತಯಾರಿ ಮಾಡಬೇಕು ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಗೋ ಬ್ಯಾಕ್ ಹೋರಾಟ
ಜಿಲ್ಲಾ ಸಚಿವರ ನೇಮಕ ಮಾಡುವುದು ಆಡಳಿತದ ದೃಷ್ಟಿಯಿಂದ ಉಸ್ತುವಾರಿ ಸಚಿವರ ನೇಮಕ ಆಗುವುದು ರಾಜಕೀಯದ ದೃಷ್ಟಿಯಿಂದ ಅಲ್ಲ. ಪಕ್ಷ ಸಂಘಟನೆಗೆ ನಮ್ಮಲ್ಲಿ ಅಧ್ಯಕ್ಷರು ಇದ್ದಾರೆ. ಪ್ರತಿಯೊಂದು ಜಿಲ್ಲೆಗೂ ಪಕ್ಷ ಸಂಘಟನೆಗೆ ಉಸ್ತುವಾರಿಗಳು ಬೇರೆ ಇರುತ್ತಾರೆ .ಜಿಲ್ಲೆಯ ಆಡಳಿತ ಚುರು ಕುಗೊಳಿಸುವುದು ಉಸ್ತುವಾರಿ ಸಚಿವರ ಕೆಲಸ ಕಾರ್ಯಕ್ರಮ ಅನುಷ್ಠಾನ ಆಗುವಂತೆ ನೋಡಿಕೊಳ್ಳುವುದು ಅವರ ಕೆಲಸ.ಅವರಲ್ಲಿ ಏನಾದರೂ ತಪ್ಪಿದ್ದರೆ ಕಾರ್ಯಕರ್ತರು ಹೇಳಿದರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಬಿಜೆಪಿ ಆರೋಪ ವಿಚಾರ ಕುರಿತು ಮಾತನಾಡಿ ಪರಮೇಶ್ವರ್, ಯಾವ ಕಾನೂನು ಸುವ್ಯವಸ್ಥೆಯೂ ಹಾಳಾಗಿಲ್ಲ.ಕೊಲೆ ಆಗಿದೆ ಆಗಬಾರದಿತ್ತು.ಕೊಲೆ ಯಾಕಾಗಿದೆ ಅನ್ನೋದನ್ನ ಎಲ್ಲರೂ ಗಮನಿಸಿದ್ದಾರೆ .ಎಲ್ಲಾದರೂ ಕೋಮು ಗಲಭೆ ಆಗಿದೆಯಾ? ಗಣೇಶ ಹಬ್ಬ, ರಂಜಾನ್ ಎಲ್ಲವೂ ಸುಖಕರವಾಗಿ ಮುಗಿದಿದೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ಘಟನೆ ನಡೆಯುತ್ತಿತ್ತು.
ರಾಜಕೀಯ ದೃಷ್ಟಿಯಿಂದ ಯಾವುದೇ ಕೊಲೆ ಆಗಿಲ್ಲ ಕೊಲೆ, ಹೋರಾಟ ಏನು ಸಂಭವಿಸಿಲ್ಲ. ಕಾನೂನು ಸುವ್ಯವಸ್ಥೆಯ ಡೆಫಿನಿಷನ್ ಏನು ಎಂದು ತಿಳಿಸಿ. ಬಿಜೆಪಿ ಆಡಳಿತ ಇದ್ದಾಗ ಕೊಲೆ ಆಗಲೇ ಇಲ್ವಾ! ಸಂದರ್ಭ ಬಂದಾಗ ಅಂಕೆ ಸಂಖ್ಯೆ ಬಿಡುಗಡೆ ಮಾಡುತ್ತೇನೆ. ಬಿಜೆಪಿ ಕಾಲದಲ್ಲಿ ಕೊಲೆ ಆಗಿತ್ತಲ್ವಾ, ಎರಡು ಅವಧಿಯನ್ನು ಹೋಲಿಸಿ ನೋಡೋಣ ಕಾನೂನು ಸುವ್ಯವಸ್ಥೆ ಎಂದು ಹಾರಿಕೆಯ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ:
ಸಂತ್ರಸ್ತ ಸ್ತ್ರೀಯರಿಗೆ ನಾವು ಧೈರ್ಯ ನೀಡಿದ್ದೇವೆ.ತನಿಖಾ ಸಂಸ್ಥೆಗಳ ಮುಂದೆ ಬಂದು ಹೇಳಿಕೆ ನೀಡಲು ಹೇಳಿದ್ದೇವೆ .ನಾನು ಮತ್ತು ಮುಖ್ಯಮಂತ್ರಿಗಳು ರಕ್ಷಣೆಯ ಭರವಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮೂರು ಸ್ಥಾನಗಳಲ್ಲಿ ಉಪಚುನಾವಣೆ ವಿಚಾರಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಸ್ಪರ್ಧೆ ಕುರಿತು ಪರಮೇಶ್ವರ್ ಹೇಳಿಕೆ ನೀಡಿದ್ದು,ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ ರಾಜಕೀಯದ ತೀರ್ಮಾನಗಳನ್ನು ಅಧ್ಯಕ್ಷರು ಕೈಗೊಳ್ಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
ಡಿಸಿಎಂ ರೇಸ್ ನಲ್ಲಿ ಹೆಸರು ಪ್ರಸ್ತಾಪ .ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ.ಮಾಧ್ಯಮದವರೇ ಈ ಬಗ್ಗೆ ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.