ಉಡುಪಿ: ಜೂ. 06(DaijiworldNews/AK): ಉಡುಪಿ ತಾಲೂಕು ಪಂಚಾಯತ್ ಕಟ್ಟಡದ ಸಂಕೀರ್ಣದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ವಿದ್ಯುತ್ ವ್ಯತ್ಯಯದಿಂದ ಹಿರಿಯ ನಾಗರಿಕರು ಸೇರಿದಂತೆ ನಾಲ್ವರು ಲಿಫ್ಟ್ನಲ್ಲಿ ಅರ್ಧಗಂಟೆಗಳ ಕಾಲ ಸಿಲುಕಿ ಪರದಾಡಿದ ಆತಂಕಕಾರಿ ಘಟನೆ ನಡೆದಿದೆ.
ಈ ಘಟನೆಗೆ ಜನರೇಟರ್ ಹಾಗೂ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲದಿರುವುದೇ ಕಾರಣವೆಂದು ಸ್ಥಳೀಯ ಆಡಳಿತದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.ಈ ಘಟನೆ ಬಳಿಕ ಉಡುಪಿ ತಹಶೀಲ್ದಾರ್ಗೆ ನೀಡಿದ ದೂರಿನಲ್ಲಿ ಲಿಫ್ಟ್ನಲ್ಲಿ ಸಿಲುಕಿಕೊಂಡ ವಿಶ್ವಕುಮಾರ್ ಭಟ್ ದೂರು ನೀಡಿದ್ದಾರೆ.
ಅಲ್ಲದೇ ಘಟನೆ ಬಗ್ಗೆ ವಿವರಿಸಿದ ಅವರು, ಇಂದು ನನ್ನ ವಯಸ್ಸಿನ ಇಬ್ಬರು ಸೇರಿ ಉಡುಪಿ ತಾಲೂಕು ಕಟ್ಟಡ ಸಂಕೀರ್ಣದ ಲಿಫ್ಟ್ನಲ್ಲಿರುವ ಮೊದಲ ಮಹಡಿಯಲ್ಲಿರುವ ಉಪ ನೋಂದಣಿ ಕಚೇರಿಗೆ ಹೋಗಿದ್ದೆ. ನನ್ನ ಜೊತೆಗಿದ್ದ 60 ವರ್ಷ ಮೇಲ್ಪಟ್ಟ ಇಬ್ಬರು ಹಿರಿಯರು ಆತಂಕದಿಂದ ಮೂರ್ಛೆ ಹೋಗುವ ಹಂತಕ್ಕೆ ತಲುಪಿದ್ದೇವು, ಸಾರ್ವಜನಿಕರು ನಮ್ಮನ್ನು ಹೇಗೋ ಲಿಫ್ಟ್ನಿಂದ ಹೊರಗೆ ಕರೆತಂದಾಗ ಗೊತ್ತಾಯಿತು ವಿದ್ಯುತ್ ಕಡಿತಗೊಂಡಾಗ ಜನರೇಟರ್ ಅನ್ನು ಚಲಾಯಿಸಲು ಇಂಧನವಿಲ್ಲ ಎಂದು ಲಿಫ್ಟ್ನ ಸರಿಯಾದ ನಿರ್ವಹಣೆ ಇಲ್ಲದೆ, ಜನರೇಟರ್ಗಳಿಗೆ ಇಂಧನವಿಲ್ಲದೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ನಿರ್ಗಮನ ವ್ಯವಸ್ಯೆಯು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಕೆಲಸಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಗೆ ಜನರು ಬೆಳಗ್ಗೆಯಿಂದ ಸಂಜೆವರೆಗೆ ಲಿಫ್ಟ್ ವ್ಯವಸ್ಥೆಯನ್ನು ಬಳಸುತ್ತಾರೆ. ಆಕಸ್ಮಿಕವಾಗಿ ತಾಂತ್ರಿಕ ಸಮಸ್ಯೆ ಅಥವಾ ವಿದ್ಯುತ್ ಕಡಿತವಾದರೇ ಲಿಫ್ಟ್ನಲ್ಲಿರುವ ಜನರಿಗೆ ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ. ಲಿಫ್ಟ್ ನಿರ್ವಹಣೆ ಸರಿಯಾಗಿ ನಡೆಯದಿರುವುದು ಹಾಗೂ ಲಿಫ್ಟ್ ನ ಮೇಲ್ವಿಚಾರಕರ ಜವಾಬ್ದಾರಿ ಸರಿಯಾಗಿ ನಡೆಯದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಮೊದಲ ಮಹಡಿಗೆ ಸ್ಥಳಾಂತರಿಸುವುದರಿಂದ ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ಆಳಲನ್ನು ತೋಡಿಕೊಂಡಿದ್ದಾರೆ.
ಮುಂದೆ ಇಂತಹ ಘಟನೆಗಳನ್ನು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳವಂತೆ ಸಾರ್ವಜನಿಕರು ಒತ್ತಾಯಿಸಿದರು.ಅಲ್ಲದೇ ತುರ್ತು ಸಂದರ್ಭದಲ್ಲಿ ಪವರ್ ಬ್ಯಾಕಪ್ ಸಿಸ್ಟಮ್ ಮತ್ತು ತುರ್ತು ಪ್ರೋಟೋಕಾಲ್ಗಳ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.