ಕಾಸರಗೋಡು,ಜೂ 04(DaijiworldNews/ AK): ಕಾಸರಗೋಡು ಲೋಕಸಭಾ ಕ್ಷೇತ್ರವೂ ಎರಡನೇ ಬಾರಿಗೆ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.
ಸಿಪಿಐಎಂ ಅಭ್ಯರ್ಥಿ ಎಂ .. ವಿ ಬಾಲಕೃಷ್ಣನ್ ರವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ . ಎಲ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಕಾಂಗ್ರೆಸ್ ನ ರಾಜ್ ಮೋಹನ್ ಉಣ್ಣಿ ತ್ತಾನ್ 4, 86,801 ಮತ , ಸಿಪಿಐಎಂ ನ ಎಂ . ವಿ ಬಾಲಕೃಷ್ಣನ್ 3, 85, 710 ಮತಗಳನ್ನು ಪಡೆದರೆ ತೃತೀಯ ಸ್ಥಾನ ಪಡೆದ ಬಿಜೆಪಿಯ ಅಶ್ವಿನಿ ಎಂ . ಎಲ್ 2,17, 669 ಮತಗಳನ್ನು ಪಡೆದರು.
ಬಿ ಎಸ್ಪಿ ಯಿಂದ ಸ್ಪರ್ದಿಸಿದ್ದ ಸುಕುಮಾರಿ ಎಂ 1598 , ಅನಿಶ್ ಪಯ್ಯನ್ನೂರು 743, ರಾಜೇಶ್ವರಿ 886 , ಮನೋಹರನ್ ಕೆ . 776 , ಬಾಲಕೃಷ್ಣನ್ ಎನ್ . 593, ಎನ್ . ಕೇಶವ ನಾಯ್ಕ್479 ಮತಗಳನ್ನು ಪಡೆದರೆ ನೋಟಾ 6,945 ಮತಗಳನ್ನು ಪಡೆದಿವೆ.
ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದ ಬಾಲಕೃಷ್ಣನ್ ಬಳಿಕ ಇವಿಎಂ ಮತ ಎಣಿಕೆ ಯುದ್ದಕ್ಕೂ ಹಿನ್ನಡೆಯಾಗಿ ಉಳಿದರು. ಕಳೆದ ಬಾರಿ 40, 403 ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದ ಉಣ್ಣಿ ತ್ತಾನ್ ಈ ಬಾರಿ ಗೆಲುವಿನ ಅಂತರ ದ್ವಿಗುಣ ಗೊಳಿಸಿದರು.
ಸಿಪಿಐಎಂ ಕೇಂದ್ರಗಳಲ್ಲೂ ಉಣ್ಣಿತ್ತಾ ನ್ ಮುನ್ನಡೆ ಸಾಧಿಸಿದ್ದಾರೆ.ಪೆರಿಯದ ಕೇಂದ್ರ ವಿಶ್ವ ವಿದ್ಯಾನಿಲಯದ ಕೇಂದ್ರದಲ್ಲಿ ಮತ ಎಣಿಕೆ ನಡೆಯಿತು. ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭಗೊಂಡರೂ ರಾತ್ರಿ ೮ ಗಂಟೆ ತನಕ ನಡೆಯಿತು. ಮತ ಎಣಿಕೆ ವಿಳಂಬಗೊಳ್ಳುತ್ತಿರುವುದು ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಯಿತು.
ಈ ಹಿಂದೆ ಕಡನ್ನ ಪಳ್ಳಿ ರಾಮಚಂದ್ರನ್ ಸತತ ಎರಡು ಬಾರಿ ಕಾಸರಗೋಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆ ಬಳಿಕ 1984 ರಲ್ಲಿ ಐ . ರಾಮ ರೈ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್ ಗೆ ಈ ಕ್ಷೇತ್ರ ಕನಸಾಗಿ ಉಳಿದಿತ್ತು. 2019 ರಲ್ಲಿ ರಾಜ್ ಮೋಹನ್ ಉಣ್ಣಿ ತ್ತಾನ್ ಸಿಪಿಐಎಂ ನ ಕೆ .ಪಿ ಸತೀಶ್ಚಂದ್ರನ್ ರವರನ್ನು ಸೋಲಿಸಿ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಪತಾಕೆ ಹಾರಿಸಿದರು. ಸತತ ಎರಡನೇ ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಕಂಡಿದೆ
1. ರಾಜ್ ಮೋಹನ್ ಉಣ್ಣಿ ತ್ತಾನ್ ( ಕಾಂಗ್ರೆಸ್ ) 4, 86 , 801
2. ಎಂ . ವಿ ಬಾಲಕೃಷ್ಣನ್ ( ಸಿಪಿಐಎಂ ) 3,85,710
3. ಅಶ್ವಿನಿ ಎಂ . ಎಲ್ (ಬಿಜೆಪಿ) 2,17, 669
4. ಸುಕುಮಾರಿ ಎಂ . ( ಬಿ ಎಸ್ಪಿ ) 1,598
5 . ಅನಿಶ್ ಪಯ್ಯನ್ನೂರು ( ಪಕ್ಷೇತರ ) 743
6 ಬಾಲಕೃಷ್ಣ ಎನ್ . ( ಪಕ್ಷೇತರ ) 593
7. ಮನೋಹರನ್ ಕೆ. ( ಪಕ್ಷೇತರ ) 776
8. ಎನ್ . ಕೇಶವ ನಾಯಕ್ ( ಪಕ್ಷೇತರ ) 463
9. ರಾಜೇಶ್ವರಿ ( ಪಕ್ಷೇತರ ) 886
10 ನೋಟಾ 7033