ವಿಟ್ಲ, ಮೇ.10(Daijiworld News/SS): ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ವು ಹಣ ನೀಡುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಶಿವಗುರುದತ್ತ ಎಂಬವರಿಗೆ ಆರೋಪಿತ ಕೇಶವ ಮೂರ್ತಿ ಸಿ ಎಂಬವರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭಾಂಶ ಕೊಡುತ್ತೇನೆ ಎಂದು ಪುಸಲಾಯಿಸಿ ನಂಬಿಸಿ 60,000 ರೂಪಾಯಿಯನ್ನು ಚೆಕ್ ನಂ 860395 ಮೂಲಕ ಪಡೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಹಿಂದಕ್ಕೆ ನಿಡದೇ, ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆ.
ಇದೀಗ ಆರೋಪಿ ಕೇಶವ ಮೂರ್ತಿ ಸಿ ವಿರುದ್ಧ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.