ಪುತ್ತೂರು, ಮೇ 10 (Daijiworld News/MSP): ಪೋಷಕರು ಮಾಡಿದ ಯಡವಟ್ಟಿನಿಂದ ಮಗು, ಸುಮಾರು 20 ನಿಮಿಷ ಕಾಲ ಕಾರಿನಲ್ಲೇ ಬಂಧಿಯಾದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಳಿಯ ಸಂಜೀವ ಶೆಟ್ಟಿ ಜವಳಿ ಅಂಗಡಿಗೆ ಬಟ್ಟೆ ಖರೀದಿಗೆ, ಮಹಾರಾಷ್ಟ್ರ ನೋಂದಣಿಯ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಹೋಗಿದ್ದಾರೆ. ಆದರೆ ಈ ಸಂದರ್ಭ ಕಾರ್ ಆಟೋ ಲಾಕ್ ಆಗಿದೆ, ಆದರೆ ಮಗು ಯಾವುದರ ಅರಿವೇ ಇಲ್ಲದೆ ಕಾರಿನ ಕೀಯನ್ನು ಹಿಡಿದುಕೊಂಡು ಆಟ ಆಡುತ್ತಿತ್ತು. ಕಾರಿನೊಳಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದಾಗ ರಕ್ಷಣೆಗೆ ಮುಂದಾ ಮಗು ಜೋರಾಗಿ ಅಳತೊಡಗಿತ್ತು.
ಪೋಷಕರ ಕೂಡಾ ಇದೇ ವೇಳೆ ಧಾವಿಸಿದ್ದು ಕೀ ಒಳಗೆ ಬಿಟ್ಟಿದ್ದರಿಂದ ಪೋಷಕರು ದಿಕ್ಕು ತೋಚದಂತಾಗಿದ್ದಾರೆ. ಕೊನೆಗೆ ಕಾರಿನ ಗ್ಲಾಸ್ ಬ್ರೇಕ್ ಮಾಡಿ ಮಗುವನ್ನು ರಕ್ಷಿಸಲಾಗಿದೆ. ಕೂರ್ನಡ್ಕ ಯೆಂಗ್ ಮೆನ್ಸ್ ನ ಅಧ್ಯಕ್ಷ ಸಿರಾಜ್ ಎ ಕೆ ಮತ್ತು ಜಾಸ್ಲಿ ಡಿಸೋಜ ಎಂಬವರು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಕನ್ನಡಿ ಒಡೆದು ಮಗುವನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.