ಮೆಕ್ಸಿಕೊ, ಸೆ.09: ಮೆಕ್ಸಿಕೊ ಇತಿಹಾಸದಲ್ಲೇ ಅತ್ಯಂತ ಪ್ರಬಲ ಎಂದು ಹೇಳಲಾಗುತ್ತಿರುವ ಭೂಕಂಪವು ದೇಶದ ದಕ್ಷಿಣ ಕರಾವಳಿಯನ್ನು ಛಿದ್ರಗೊಳಿಸಿದ್ದು 60 ಜನರನ್ನು ಬಲಿಪಡೆದುಕೊಂಡಿದೆ.
ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪದಿಂದ ಕಟ್ಟಡಗಳು ತರಗೆಲೆಯಂತೆ ಭೂಮಿಗೊರಗಿದ್ದು ಜನರು ತೆರೆದ ಪ್ರದೇಶಗಳಿಗೆ ಓಡುವ ಮೂಲಕ ಪ್ರಾಣವನ್ನುಳಿಸಲು ಪ್ರಯತ್ನಿಸಿದರು.
ಮಧ್ಯರಾತ್ರಿ ಭೂಕಂಪ ಸಂಭವಿಸಿರುವ ಕಾರಣ ಜನರು ಗಾಢನಿದ್ದೆಯಲ್ಲಿದ್ದ ಪರಿಣಾಮ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.
ಮೆಕ್ಸಿಕೊ ನಗರ ಈಗಾಗಲೇ ಕತಿಯಾ ಚಂಡಮಾರುತವನ್ನು ಎದುರಿಸಲು ಸನ್ನದ್ಧವಾಗುತ್ತಿದ್ದು ಈ ಮಧ್ಯೆ ಸಂಭವಿಸಿರು ಭೂಕಂಪ ಭದ್ರತಾ ಮತ್ತು ರಕ್ಷಣಾಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ.
ಕತಿಯಾ ಚಂಡಮಾರುತವು ಮೆಕ್ಸಿಕೊ ಕರಾವಳಿಯನ್ನು ಶನಿವಾರದಂದು ಅಪ್ಪಳಿಸಲಿದ್ದು ಇದರಿಂದ ವ್ಯಾಪಕ ನೆರೆ ಉಂಟಾಗಬಹುದು ಎಂದು ಅನುಮಾನಿಸಲಾಗಿದೆ.