ಮಂಗಳೂರು, ಜೂ 04(DaijiworldNews/MS): ಸುಮಾರು ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಲಿಲ್ಲ ಎಂದು ಜಂಟಿಯಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಬೇಕೆಂದು ಅಭಿಯಾನಕ್ಕೆ ಜನಸ್ಪಂದಿಸಿದ್ದು ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಟಗೆ ಮತ ಬಿದ್ದಿದೆ.
ಸದ್ಯದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡದಲ್ಲಿ 2685, ಕಾಸರಗೋಡು 44, ಉಡುಪಿಯಲ್ಲಿ 621 ನೋಟಾಗೆ ಮತ ಚಲಾವಣೆಯಾಗಿದೆ. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆ, ಸೌಜನ್ಯಾ ಹೋರಾಟ ಸಮಿತಿ ನೋಟಾ ಅಭಿಯಾನಕ್ಕೆ ಕೆಲವು ದಿನಗಳ ಹಿಂದೆ ಕರೆನೀಡಿತ್ತು.
ನೋಟಾ ಜಾರಿಗೆ ಬಂದಿದ್ದು ಯಾವಾಗ?
ನೋಟಾ ಎಂದರೆ None of the above ಎಂಬುವುದರ ಸಂಕ್ಷಿಪ್ತ ರೂಪ. ಈ ಮೇಲಿನ ಯಾರೂ ಅಲ್ಲ ಎನ್ನುವುದು ಇದರ ಅರ್ಥ. ಚುನಾವಣೆಯ ಅಖಾಡದಲ್ಲಿ ಇಲ್ಲದವರು ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಒಲ್ಲದವರು ನೋಟಾ ಆಯ್ಕೆ ಮಾಡಿಕೊಳ್ಳಬಹುದು. ್2013ರಲ್ಲಿ ಛತ್ತೀಸ್ ಘಢ, ಮಿಜೋರಾಂ, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಂಚರಾಜ್ಯ ಚುನಾವಣೆಯಲ್ಲಿ ಈ ಆಯ್ಕೆಯನ್ನು ಚುನಾವಣಾ ಆಯೋಗ ಪರಿಚಯಿಸಿತ್ತು. 2014ರ ಲೋಕ ಸಭೆ ಚುನಾವಣೆಯಲ್ಲೂ ನೋಟಾ ಆಯ್ಕೆ ಇತ್ತು ಈ ರೀತಿಯ ಆಯ್ಕೆಯನ್ನು ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ ನ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗ ನೋಟಾವನ್ನು ಪರಿಚಯಿಸಿತ್ತು.
ನೋಟಾ ಆಯ್ಕೆಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನೋಟಾಗೆ ಹೆಚ್ಚು ಮತ ಬಿದ್ದರೂ, ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.