ಕಾಸರಗೋಡು, ಜೂ. 03(DaijiworldNews/AK): ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಾಳೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.ಬೆಳಿಗ್ಗೆ 8 ಗಂಟೆಗೆ ಪೆರಿಯ ಕೇಂದ್ರ ವಿದ್ಯಾಲಯದ ಮೂರು ಬ್ಲಾಕ್ ಗಳಲ್ಲಿ ಮತ ಎಣಿಕೆ ನಡೆಯಲಿದೆ.
ಪ್ರಥಮ ಬ್ಲಾಕ್ ನಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರ , ಎರಡನೇ ಬ್ಲಾಕ್ ನಲ್ಲಿ ಕಾಞಂಗಾಡ್, ತ್ರಿಕ್ಕರಿಪುರ , ಪಯ್ಯನ್ನೂರು ಹಾಗೂ ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ತಲಾ 14 ಟೇಬಲ್ ಗಳನ್ನು ಸಜ್ಜು ಗೊಳಿಸಲಾಗಿದೆ. ಮೂರನೇ ಕೇಂದ್ರದಲ್ಲಿ ಅಂಚೆ ಮತ ಗಳ ಎಣಿಕೆ ನಡೆಯಲಿದೆ .ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಆರಂಭ ಗೊಳ್ಳಲಿದೆ. 8.30 ರಿಂದ ಇವಿ ಎಂ ಮತ ಗಳ ಎಣಿಕೆ ನಡೆಯಲಿದೆ.
ಇನ್ನು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಬಾರೀ ತ್ರಿಕೋನ ಸ್ಪರ್ಧೆ ಯ ಮೂಲಕ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ನಿಂದ ಹಾಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಸಿಪಿಐಎಂ ನಿಂದ ಎಂ .ವಿ ಬಾಲಕೃಷ್ಣನ್ ಹಾಗೂ ಬಿಜೆಪಿ ಯಿಂದ ಎಂ .ಎಲ್ ಅಶ್ವಿನಿ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ. ಆದರೆ ಕಾಂಗ್ರೆಸ್ ಮತ್ತು ಸಿಪಿ ಐಎಂ ನಡುವೆ ನೇರ ಸ್ಪರ್ಧೆ ಕಂಡು ಬರುತ್ತಿದೆ . ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2019 ರಲ್ಲಿ 30 ವರ್ಷ ಗಳ ಬಳಿಕ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ರಾಜ್ ಮೋಹನ್ ಉಣ್ಣಿತ್ತಾನ್ 40 ಸಾವಿರಕ್ಕೂ ಅಧಿಕ ಮತಗಳ ಅಂತರ ದಿಂದ ಗೆಲುವು ಸಾ ಧಿ ಸಿದ್ದರು. ಇದರಿಂದ ಈ ಬಾರಿಯೂ ಕ್ಷೇತ್ರವು ಗಮನ ಸೆಳೆ ಯುವಂತೆ ಮಾಡಿದೆ. ಕಳೆದ ಬಾರಿ ಕಳಕೊಂಡ ಕ್ಷೇತ್ರವನ್ನು ಮರಳಿ ಪಡೆಯುವ ಬಗ್ಗೆ ಸಿ ಪಿ ಐ ಎಂ ನಿರೀಕ್ಷೆ ಹೊಂದಿದ್ದು ಕ್ಷೇತ್ರ ಉಳಿಸುವ ವಿಶ್ವಾಸ ಕಾಂಗ್ರೆಸ್ ಹೊಂದಿದೆ. ಬಿಜೆಪಿ ಮತ ಹೆಚ್ಚಿಸುವ ಮೂಲಕ ಎರಡೂ ಪಕ್ಷ ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಇದರಿಂದ ಕಾಸರಗೋಡು ಕ್ಷೇತ್ರವೂ ಗಮನ ಸೆಳೆಯುತ್ತಿದೆ.
ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ 76.04 ಶೇಕಡಾ ಮತದಾನವಾಗಿತ್ತು