ಕಾಪು, ಜೂ. 02(DaijiworldNews/AA): ಗಂಭೀರ ಅಪರಾಧ ಚಟುವಟಿಕೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇರೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಮಿತ್ರಾಜ್, ಪ್ರಕಾಶ್, ವರುಣ್ ಕುಮಾರ್, ಕಾರ್ತಿಕ್, ಅಭಿಷೇಕ್ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕಾಪು ಜಯಶ್ರೀ ಮಾನೆ ನೀಡಿರುವ ದೂರಿನ ಪ್ರಕಾರ, ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆರು ಮಂದಿ ಮಂಗಳೂರು ಕಡೆಗೆ ಉದ್ಯಾವರ ಸೇತುವೆ ಬಳಿ ತೆರಳುತ್ತಿದ್ದಾಗ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದಾರೆ. ಬಳಿಕ ಹಾರ್ನ್ ಮಾಡುವ ಮೂಲಕ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸುವಂತೆ ಸೂಚಿಸಲಾಯಿತು. ಆದರೆ ಅವರೆಲ್ಲಾ ಆ ಸೂಚನೆಯನ್ನು ನಿರಾಕರಿಸಿ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದರು. ನಂತರ ಕಾಪು ಠಾಣಾ ಎಸ್ಐ ಅಬ್ದುಲ್ ಖಾದರ್ ಮತ್ತು ತಂಡದ ಸಹಾಯದಿಂದ ಕಾರನ್ನು ಹಿಂಬಾಲಿಸಿ ಕೋತಲಕಟ್ಟೆ, ಉಳಿಯಾರಗೋಳಿ ಬಳಿ ವಶಕ್ಕೆ ಪಡೆಯಲಾಯಿತು.
ಇನ್ನು ಕಾರಿನಲ್ಲಿದ್ದ ಡ್ರ್ಯಾಗರ್, ಹರಿತವಾದ ಚಾಕು, ಸ್ಟೀಲ್ ರಾಡ್, ಮೆಣಸಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕಾರು ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ವಶಕ್ಕೆ ಪಡೆದಿದ್ದಾರೆ.