ಬೆಳ್ತಂಗಡಿ, ಜೂ. 02(DaijiworldNews/AA): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರತ ಲಾರಿಯೊಂದು ಅದರ ಚಾಲಕನ ದುಡುಕುತನದ ಚಾಲನೆಯಿಂದಾಗಿ ಬೈಕ್ ಸಹಿತ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ಹಳೆಕೋಟೆ ಬಳಿ ಶನಿವಾರ ನಡೆದಿದೆ.
ಮಚ್ಚಿನ ಗ್ರಾಮದ ಕೃಷಿಕ ವಿನೋದ್ ಗೌಡ (45) ಮೃತ ದುರ್ದೈವಿ.
ಲಾರಿ ಚಾಲಕ ಮಹಮದ್ ರಾಜಿಕ್ (30) ವಿರುದ್ಧ ದೂರು ದಾಖಲಿಸಲಾಗಿದೆ. ಬೆಳ್ತಂಗಡಿ ಕಸಬಾ ಹಳೆಕೋಟೆ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಬೈಕ್ ಜತೆಗೆ ಲಾರಿಯ ಹಿಂಬದಿ ಟಯರ್ನಡಿಗೆ ಬಿದ್ದಿದ್ದಾರೆ.
ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸವಾರನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.