ಮೂಡುಬಿದಿರೆ, ಜೂ1 (DaijiworldNews/MS): ಆಸ್ಪತ್ರೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟ ಬಗ್ಗೆ ದೂರು ದಾಖಲಾಗಿದೆ. ಮೃತರನ್ನು ಸುರೇಶ್ ಎಂದು ಗುರುತಿಸಲಾಗಿದೆ.
ಮೇ 30ರಂದು ಬೆಳಗ್ಗೆ ಸುರೇಶ್ ಮೂಡುಬಿದಿರೆಯ ಪ್ರಾಂತ್ಯ ಗ್ರಾಮದ ಹನುಮಾನ್ ದೇವಸ್ಥಾನದ ಬಳಿಯ ಸರಕಾರಿ ಶಾಲೆಯ ಶಾಲಾ ಕಟ್ಟಡದ ಕೆಲಸ ಮಾಡುತ್ತಿದ್ದರು. ಪೂ.11:55ರ ವೇಳೆಗೆ ಅಟ್ಟಳಿಗೆ ಮೇಲೆ ಹಾಕಿದ ಕಬ್ಬಿಣದ ಹಲಗೆ ಜಾರಿ ಸುರೇಶ್ ಬಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೇ 30ರಂದು ಸಂಜೆ 4:25ಕ್ಕೆ ಮೃತಪಟ್ಟಿದ್ದಾರೆ. ಕಟ್ಟಡದ ಗುತ್ತಿಗೆದಾರ ಹರೀಶ್ ಶೆಟ್ಟಿ, ಉಪ ಗುತ್ತಿಗೆದಾರರಾದ ಗಿರೀಶ್ ಮತ್ತು ಯಲ್ಲಪ್ಪ ಸರಿಯಾದ ಸುರಕ್ಷತಾ ಸಾಮಗ್ರಿ ಬಳಕೆ ಮಾಡಲಿಲ್ಲ ಮೃತಪಟ್ಟ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.