ಕುಂದಾಪುರ , ಮೇ.31(DaijiworldNews/AK):ರಾಘವೇಂದ್ರ ರಾಯರು ತಮ್ಮ ತಂದೆಯವರಿಗೆ ಅಚ್ಚುಮೆಚ್ಚು. ಪ್ರತೀ ವರ್ಷ ಅವರ ಹೆಸರಿನಲ್ಲಿ ಪೂಜೆ ಮಾಡಿಸುತ್ತಾರೆ. ಈ ದಿನ ತಂದೆ ಬರುವುದು ಸಾಧ್ಯವಾಗದ ಕಾರಣಕ್ಕೆ ನಾನು ಬಂದಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು , ರಾಜ್ಯದಲ್ಲಿ 6 ಕ್ಷೇತ್ರದ ಚುನಾವಣೆಗಳಿಗೆ ವಿಧಾನಪರಿಷತ್ ಚುನಾವಣೆ ನಡೀತಿದೆ. ವಿಶೇಷವಾಗಿ ಈ ಭಾಗದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಬೇರೆ ಬೇರೆ ಕಾರಣಗಳಿಗೆ ಹೆಚ್ಚು ಚರ್ಚೆಯಾಗುತ್ತಿದೆ. ಬಂಡಾಯ ಅಭ್ಯರ್ಥಿಗಳು ಕೂಡಾ ಅಖಾಡದಲ್ಲಿರತಕ್ಕಂತದ್ದು. ಒಂದು ನನಗೆ ಸಂತೋಷ ತಂದಿರುವ ವಿಚಾರ ಈ ಭಾಗದ ಎಲ್ಲಾ ನಮ್ಮ ಶಾಸಕರು, ವಿಧಾನಪರಿಷತ್ ಸದಸ್ಯರು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ಗೊಂದಲ ಇಲ್ಲದೇ. ವ್ಯತ್ಯಾಸವಿಲ್ಲದೇ ಒಗ್ಗಟ್ಟಾಗಿ, ಡಾ. ಧನಂಜಯ ಸರ್ಜಿಯವರ ಪರವಾಗಿ ಅದೇ ರೀತಿ ಭೋಜೇಗೌಡರ ಪರವಾಗಿ ಶ್ರಮ ಹಾಕುತ್ತಿದ್ದಾರೆ ಎಂದರು. ಅದರ ಪರಿಣಾಮ ಇಬ್ಬರೂ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡು ವಿಜಯಶಾಲಿಯಾಗ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದರು.
ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಪ್ರಸ್ತಾಪ ಮಾಡುವುದಕ್ಕೆ ಇಷ್ಟ ಪಡುತ್ತೇನೆ. ಇವತ್ತೇನೂ ಈಶ್ವರಪ್ಪನವರು ನಮ್ಮ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಬಗ್ಗೆ ಅನೇಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ, ಪ್ರಶ್ನೆ ಮಾಡಿದ್ದಾರೆ. ತಮಗೆ ಗೊತ್ತಿರಲಿ. ಈ ದೇವಸ್ಥಾನದಲ್ಲಿ ನಿಂತುಕೊಂಡು ನಾನು ಮಾತಾಡ್ತಾ ಇದ್ದೇನೆ. ಯಾರನ್ನು ಅಭ್ಯರ್ಥಿ ಮಾಡ್ಬೇಕು ಪದವೀಧರ ಕ್ಷೇತ್ರದಲ್ಲಿ ಅಂತ ಚರ್ಚೆ ಆದಾಗ ಈಶ್ವರಪ್ಪನವರು ಸಹಾ ಡಾ. ಧನಂಜಯ ಸರ್ಜಿಯವರು ಸಜ್ಜನರಿದ್ದಾರೆ. ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ಕೊಡ್ಬೇಕು ಅಂತ ಹೇಳಿ, ಸ್ವತಃ ಈಶ್ವರಪ್ಪನವರು ಸಹಾ ಧನಂಜಯ ಸರ್ಜಿಯವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಬಹುಶಃ ಎಲ್ಲಾ ಅವರು ಮರೆತಿದ್ದಾರೆ ಅಂತ ಕಾಣುತ್ತಿದೆ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.
ಆದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲ್ಸ ಮಾಡ್ತಿದಾರೆ. ಅಭುತಪೂರ್ವವಾಗಿರ ತಕ್ಕಂತ ಗೆಲುವು ನಮ್ಮದಾಗುತ್ತದೆ ಎನ್ನುವ ಭರವಸೆ ನನಗಿದೆ. ನಮ್ಮ ಮಾತುಗಳನ್ನು ಕೇಳಿದ್ರೆ ತಮಗೆ ಉತ್ಪ್ರೇಕ್ಷೆ ಅಂತ ಅನ್ನಿಸ್ಬಹುದು. ಆದರೆ ಕಳೆದ ಬಾರಿಯಷ್ಟೇ ಅಥವಾ ಅದಕ್ಕಿಂತ ಒಂದು ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿತ್ತೋ, ಬಿಜೆಪಿ ಜೆಡಿಎಸ್ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೆ. ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿಯವರ ಕೈಯನ್ನು ಹಿಡಿದಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನಮಂತ್ರಿಗಳಾಗಬೇಕು ಎನ್ನುವ ಹಂಬಲ ಇವತ್ತು ಮತದಾರರಲ್ಲಿತ್ತು. ಅದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಭವಿಷ್ಯ ನುಡೀತೇನೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರಿಗೆ ನಿರಾಸೆ ಕಾದಿದೆ ಅಷ್ಟಂತೂ ಸತ್ಯ. ಏನು ಕಾಂಗ್ರೆಸ್ ಪಕ್ಷದ ಮುಖಂಡರು ಬಹಳ ವಿಶ್ವಾಸದಲ್ಲಿದ್ದಾರೆ, ಅವರಿಗೆ ದೊಡ್ಡ ನಿರಾಸೆ ಕಾದಿದೆ. ಜೂನ್ 4ನೇ ತಾರೀಖಿಗೆ ಮತ ಎಣಿಕೆ ಆದಾಗ. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಇರಬಹುದು. ನಮ್ಮ ಗೆಲುವನ್ನು ತಡೆಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೂ ಇಲ್ಲ, ನಿಸ್ಸಂಶಯವಾಗಿ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್. ಅತ್ಯಂತ ಹೆಚ್ಚ ಸ್ಥಾನಗಳನ್ನು ಪಡೀತೇವೆ. ಇಷ್ಟಂತು ಸತ್ಯ ಎಂದು ನುಡಿದರು.
ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ಆಗುತ್ತದೆ. ಅವ್ರೇನೂ ನಂಬಿಕೊಂಡಿರ ತಕ್ಕಂತಹಾ ಗ್ಯಾರೆಂಟಿ ಅವರ ಕೈ ಹಿಡೀತದೆ ಎನ್ನುವ ಭಾವನೆ ಇತ್ತು ಅವರಲ್ಲಿ. ಅಲ್ಲೂ ಕೂಡಾ ಸಂಪೂರ್ಣ ವಿಫಲವಾಗಿದೆ. ಮತದಾರರು ಇವತ್ತು ದೇಶದ ಅಭಿವೃದ್ಧಿಯನ್ನು ಮೆಚ್ಚಿ, ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.