ಮಂಗಳೂರು, ಮೇ 30 (DaijiworldNews/MS): ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜಿಲ್ಲೆಗೊಂದು ಅತ್ಯಾಕರ್ಷಕವಾದ ಲೋಗೊ ವಿನ್ಯಾಸ ಮತ್ತು ಟ್ಯಾಗ್ಲೈನ್ ರೂಪಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿದೆ.
ತುಳುನಾಡಿನ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಐತಿಹಾಸಿಕ ಹಿನ್ನಲೆ ಸೇರಿದಂತೆ ಈ ನೆಲದ ಸೊಗಡು ಬಿಂಬಿಸುವ ಅರ್ಥಪೂರ್ಣ ಥೀಮ್ ಆಧಾರಿತ ಲೋಗೊ ವಿನ್ಯಾಸ ಮತ್ತು ಟ್ಯಾಗ್ಲೈನ್ ನಿರೀಕ್ಷಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.
ಆಯ್ಕೆಯಾಗುವ ಲೋಗೊಗೆ 15,000 ರೂ ಮತ್ತು ಟ್ಯಾಗ್ಲೈನ್ಗೆ 10,000 ರೂ. ಬಹುಮಾನ ನೀಡಲಾಗುತ್ತದೆ. ಆಸಕ್ತರು ಜೂ.2ರೊಳಗೆ ಕಳುಹಿಸಬೇಕು. ಭಾಗವಹಿಸುವವರು ಲೋಗೋ ಮತ್ತು ಅಡಿಬರಹವನ್ನು ರಚಿಸಬೇಕು ಜೊತೆಗೆ ಅದು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ, ಪರಂಪರೆ, ವಿಭಿನ್ನತೆಗಳ ಕೊಡುಗೆಗಳ ಮೌಲ್ಯವನ್ನು ಪ್ರತಿಧ್ವನಿಸುವಂತಿರಬೇಕು.
ಆಸಕ್ತರಿಗಾಗಿ:
https://docs.google.com/document/d/1ELW98YAfksARgCmNHOmDDH67u5tfYNUfRmMehAEPtN0/edit?pli=1#heading=h.god9tk7nsufy