ಮಂಗಳೂರು, ಮೇ 30 (DaijiworldNews/MS): ಲೋಕಸಭೆ ಚುನಾವಣೆಯೂ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದು ಸರಿ ಸುಮಾರು ಒಂದು ತಿಂಗಳು ಕಳೆದಿವೆ. ಇನ್ನು ಜೂ.4 ರಂದು ನಡೆಯಲಿರುವ ಮತ ಎಣಿಕೆಗೆ ಜಿಲ್ಲಾ ಚುನಾವಣಾ ಆಯೋಗದಿಂದ ಭರದ ಸಿದ್ದತೆಯೂ ನಡೆದಿದೆ.
ಏ. 26 ರಂದು ನಡೆದಿದ್ದ ಚುನಾವಣೆಯಲ್ಲಿ ದ.ಕ ಲೀಕಸಭಾ ಕ್ಷೇತ್ರದ 9 ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದ್ದು, ಆ ಯಂತ್ರಗಳನ್ನು ಹಾಗೂ ಅಂಚೆಮತಪತ್ರಗಳನ್ನು ಒಳಗೊಂಡ ಮತಪೆಟ್ಟಿಗೆಗಳು ಸುರತ್ಕಲ್ ಎನ್ ಐಟಿಕೆ ಯ ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆ ಇರಿಸಲಾಗಿದೆ. ಮತದಾನ ನಡೆದು ಒಂದು ತಿಂಗಳಾದರೂ ಜಿಲ್ಲೆಯಲ್ಲಿ ಈ ಬಾರಿ ಯಾರು ಸೋಲುತ್ತಾರೆ ಯಾರು ಗೆಲುವಿತ್ತಾರೆ ಎನ್ನುವ ಲೆಕ್ಕಚಾರ ಮಾತ್ರ ಇನ್ನೂ ನಡೆಯುತ್ತಲೇ ಇದೆ. ಇನ್ನೊಂದೆಡೆ ನೇರಾ ನೇರಾ ಸ್ಪರ್ಧೆ ಎದುರಿಸುತ್ತಿರುವ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಗೆಲುವು ನಮ್ಮ ಅಭ್ಯರ್ಥಿಗಳದ್ದೇ ಎಂದು ಘಂಟಾಘೋಷವಾಗಿ ಹೇಳುಕೊಳ್ಳುತ್ತಿದ್ದರೂ, ಅಂತಿಮವಾಗಿ ಜಯ ಯಾರದ್ದು ಎಂಬ ಕುತೂಹಲ,ಆತಂಕಕ್ಕೆ ತೆರೆಬೀಳಲು ಇನ್ನೂ ನಾಲ್ಕು ದಿನ ಕಾಯಲೇಬೇಕು.
ಈ ಬಾರಿ ಜಿಲ್ಲೆಯಲ್ಲಿ ಮನೆ ಮತದಾನ ಸೇರಿದಂತೆ ಒಟ್ಟು. ಶೇ.78.02 ಮತದಾನ ದಾಖಲಾಗಿದ್ದು ಕೈ - ಕಮಲ ಪಕ್ಷದ ಜಿದ್ದಾಜಿದ್ದಿನ ಹೋರಾಟಕ್ಕೆ ಲೋಕಸಭಾ ಕ್ಷೇತ್ರದ ಕಣ ಸಾಕ್ಷಿಯಾಗಿತ್ತು.