ಪತ್ರಿಕಾ ಪ್ರಕಟಣೆ
ಮಣಿಪಾಲ, ಮೇ 30: ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಶನ್ [ಮಾಹೆ]ಯ ಪ್ರತಿಷ್ಠಿತ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ]ಯವಿದ್ಯುನ್ಮಾನ ಮತ್ತು ಸಂವಹನ ತಂತ್ರಜ್ಞಾನ [ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್-ಇಸಿಇ] ವಿಭಾಗವುಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿರುವ ಸೂಕ್ಷ್ಮ ತರಂಗ ಮತ್ತು ಸ್ಪರ್ಶತಂತು ಪ್ರಯೋಗಾಲಯ [ಮೈಕ್ರೋವೇವ್ ಆ್ಯಂಡ್ಆ್ಯಂಟೆನಾ ಲ್ಯಾಬ್] ವನ್ನು ಇತ್ತೀಚೆಗೆಆರಂಭಿಸಿದ್ದು, ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ಎಂಐಟಿಯ ಎಬಿ-5, ಇಸಿಇ ಸೆಮಿನಾರ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಡಾ. ವೆಂಕಟೇಶ್ ಅವರು ತಮ್ಮ ಉದ್ಘಾಟನ ಭಾಷಣದಲ್ಲಿ, ‘ಈ ಅತ್ಯಾಧುನಿಕ ಪ್ರಯೋಗಾಲಯವು ಮಾಹೆ ಸಂಸ್ಥೆಗೆ ಹೆಮ್ಮೆಯಾಗಿದೆ. ಇದು ಶೈಕ್ಷಣಿಕ ಮತ್ತು ಸಂಶೋಧನಾಸಕ್ತರಿಗೆ ಉತ್ತಮ ಅವಕಾಶವನ್ನು ನೀಡಲಿದೆ. ಅಲ್ಲದೆ, ಮೈಕ್ರೋವೇವ್ ಮತ್ತು ಆ್ಯಂಟೆನಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯದ ಅತ್ಯುತ್ಕೃಷ್ಟ ಕೇಂದ್ರವಾಗಲಿದೆ’ ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಾಹೆಯ ಸಹ-ಉಪಕುಲಪತಿ ಡಾ. ನಾರಾಯಣ ಸಭಾಹಿತ್ ಅವರು ಹೊಸ ಪ್ರಯೋಗಾಲಯ ಆರಂಭಗೊಂಡಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತ, ‘ಇದು ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರಗಳೆರಡಕ್ಕೂ ವಿಶೇಷ ಕೊಡುಗೆ ನೀಡಲಿದೆ. ಮುಂದೆ, ಅನ್ಯಾನ್ಯ ಸಂಶೋಧನ ಸಂಸ್ಥೆಗಳ ಜೊತೆಗೆ ಇದು ಸಂಪರ್ಕವನ್ನು ಹೊಂದಿ ವಿಸ್ತಾರಗೊಳ್ಳಲಿದೆ’ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಮಾಹೆಯ ಕುಲಸಚಿವ [ರಿಜಿಸ್ಟ್ರಾರ್] ಡಾ. ಗಿರಿಧರ ಕಿಣಿ ತಮ್ಮ ಭಾಷಣದಲ್ಲಿ, ‘ಈ ಪ್ರಯೋಗಾಲಯವು ಸಂಶೋಧನೆ ಕ್ಷೇತ್ರದಲ್ಲಿ ಭರವಸೆಯನ್ನು ಹೆಚ್ಚಿಸಲಿದೆ. ಇದು ಶೈಕ್ಷಣಿಕ ಮತ್ತು ಔದ್ಯಮಿಕ, ಕೈಗಾರಿಕ ರಂಗಗಳಿಗೆ ಸಂಪನ್ಮೂಲವನ್ನು ಒದಗಿಸಲಿದೆ.’ ಎಂದರು.
ಎಂಐಟಿಯ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್ ಅವರು ಅಧ್ಯಕ್ಷತೆ ವಹಿಸಿದ್ದು, ತಮ್ಮ ಮಾತುಗಳಲ್ಲಿ ‘ಈ ಅತ್ಯಾಧುನಿಕ ಮೆಕ್ರೋವೇವ್ ಮತ್ತು ಆಂಟೆನಾ ಪ್ರಯೋಗಾಲಯವು ವಿದ್ಯಾರ್ಥಿಗಳು ಸೂಕ್ಷ್ಮ ಚಿಂತನೆ ಮತ್ತು ಪ್ರಯೋಗಾತ್ಮಕ ಜ್ಞಾನವನ್ನು ವೃದ್ಧಿ ಪಡಿಸಲು ಸಹಕಾರಿಯಾಗಲಿದೆ’ ಎಂದರು.
ಎಂಐಟಿಯ ನಿರ್ದೇಶಕರಾದ ಕ್ಯಾ. [ನಿ.] ಡಾ. ಅನಿಲ್ ರಾಣಾ ಅವರು ಪ್ರಯೋಗಾಲಯದ ಉದ್ಘಾಟನ ಸಮಾರಂಭಕ್ಕೆ ಶುಭಹಾರೈಸುತ್ತ, ‘ಎಂಐಟಿಯ ಶೈಕ್ಷಣಿಕ ಮತ್ತು ಸಂಶೋಧನ ಶ್ರೇಷ್ಠತೆಯ ದ್ಯೋತಕವಾಗಿ ಪ್ರಯೋಗಾಲಯವು ಆರಂಭಗೊಂಡಿದೆ. ಸುಸಜ್ಜಿತ ಲ್ಯಾಬ್ನ್ನು ಆರಂಭಿಸಲು ಶ್ರಮಿಸಿದ ಪ್ರತಿಯೊಬ್ಬರು ಶ್ಲಾಘನೀಯರು’ ಎಂದರು.
ಸುಧಾರಿತ ಮೈಕ್ರೋವೇವ್ ಮತ್ತು ಆ್ಯಂಟೆನಾ ಪ್ರಯೋಗಾಲಯವು ಕೋಶಾತ್ಮಕ [ಸೆಲ್ಯುಲಾರ್] ಮತ್ತು ನಿಸ್ತಂತು [ವಯರ್ಲೆಸ್] ಅನ್ವಯಗಳಿಗಾಗಿ ಇರುವ ದ್ವಿ-ಆಯಾಮದ ಸ್ಪರ್ಶತಂತು [ಪ್ಲೇನಾರ್ ಆ್ಯಂಟೆನಾಸ್] ಸೇರಿದಂತೆ, ಎಂಐಎಂಒ ಆ್ಯಂಟೆನಾ, 5 ಜಿ ಆ್ಯಂಟೆನಾ, ಮೆಟಾಮೆಟೀರಿಯಲ್ ಆ್ಯಂಟೆನಾಗಳು, ರಾಡಾರ್ ಪ್ರೇಷಕ ಉಪಕರಣಗಳು, ಶಕ್ತಿ ವಿಭಾಜಕಗಳು, ಜೀವಚಿಕಿತ್ಸಕ ಆ್ಯಂಟೆನಾ, ನ್ಯಾನೋ ಆ್ಯಂಟೆನಾಮೊದಲಾದ ಹಲವಾರು ಉಪಕರಣ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರವಾಗಲಿದೆ.
ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ, ಮಣಿಪಾಲ್ ಡಾಟ್ ನೆಟ್ ಪ್ರೈ ಲಿ., ಇದರ ಸಂಶೋಧನೆ ಮತ್ತು ತರಬೇತಿ ವಿಭಾಗದ ನಿರ್ದೇಶಕ ಡಾ. ಯು. ಸಿ. ನಿರಂಜನ್, ಬೆಂಗಳೂರಿನ ಎನ್ಟ್ಯೂಪಲ್ ಟೆಕ್ನಾಲಜೀಸ್ ಪ್ರೈ ಲಿ., ಇದರ ಅಧಿಕಾರಿಗಳು, ಎಂಐಟಿಯ ಸಹ ಮತ್ತು ಸಹಾಯಕ ನಿರ್ದೇಶಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಂಶೋಧನಾರ್ಥಿಗಳು, ಇಸಿಇ ವಿಭಾಗದ ಸಿಬಂದಿಗಳು ಉಪಸ್ಥಿತರಿದ್ದರು.
ಯಾವುದೇ ರೀತಿ ವಿಚಾರಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಡೆಪ್ಯುಟಿ ಡೆರೆಕ್ಟರ್,- ಸಾರ್ವಜನಿಕ ಸಂಪರ್ಕ ಮತ್ತು ಸಂವಹನ.
ದೂರವಾಣಿ : 7338625909, ಈಮೇಲ್: sachin.karanth@manipal.edu