ಕಾಸರಗೋಡು, ಮೇ 29(DaijiworldNews/AA): ಮಾವಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಸರಗೋಡಿನ ಮೀಯಪದವುನಲ್ಲಿ ನಡೆದಿದೆ.
ಮೀಯಪದವು ಬುಡ್ರಿಯದ ಕೃಷ್ಣ ಮೂಲ್ಯ (62) ಮೃತ ದುರ್ದೈವಿ.
ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಅವರು ಮೇ 16ರಂದು ಸಂಜೆ ಮನೆಯ ಹಿತ್ತಿಲಿನಲ್ಲಿರುವ ಮರದಿಂದ ಮಾವಿನಕಾಯಿ ಕೊಯ್ಯುತ್ತಿದ್ದಾಗ ಕೆಳಬಿದ್ದು ಗಂಭೀರವಾಗಿ ಗಾಯಗೊಂಡು ಮಂಗಳೂರಿನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಕೃಷ್ಣ ಮೂಲ್ಯ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇನ್ನು ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದರು.