ಮಂಗಳೂರು, ಮೇ 28(DaijiworldNews/AA): ಶಾಸಕರ ಮನೆಗೆ ಮೊದಲು ಮೂರೇ ಜನ ಪೊಲೀಸರನ್ನು ಕಳುಹಿಸಿದ್ವಿ. ಅವರನ್ನು ವಿಚಾರಣೆಗೆ ಬರಲು ನೋಟೀಸ್ ನೀಡಲು ಹೋಗಲಾಗಿತ್ತು. ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆ ಎಂಟ್ರಿ, ಮನೆಯಲ್ಲಿ ಹೈಡ್ರಾಮ ಪ್ರಕರಣದ ಬಗ್ಗೆ ಎಸ್ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರೀಶ್ ಪೂಂಜಾರ ಮನೆಯಲ್ಲಿ ಜನರು ಸೇರುವುದನ್ನು ನೋಡಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು. ಹಾಗಂತ ಪೊಲೀಸರು ಅಲ್ಲಿಂದ ಓಡಿ ಹೋಗಿದ್ದಲ್ಲ. ಜನಪ್ರತಿನಿಧಿಗಳ ಮನವಿಯ ಹಿನ್ನಲೆಯಲ್ಲಿ ಪೊಲೀಸರು ವಾಪಾಸ್ ಬಂದಿದ್ದಾರೆ. ಶಾಸಕರ ಒಂದು ಕೇಸ್ ಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಠಾಣೆಯಲ್ಲಿ ಶಾಸಕರ ಜೊತೆಗಿದ್ದವರೆಲ್ಲರೂ ಆರೋಪಿಗಳಾಗ್ತಾರೆ ಎಂದು ತಿಳಿಸಿದ್ದಾರೆ.
ಸೈಬರ್ ಕ್ರೈಮ್ ಗಳ ಬಗ್ಗೆ ಮಾತನಾಡಿದ ಅವರು, ನಿಮಗೆ ಹಣ ಹಾಕಿ ಆಮೇಲೆ ಹಣ ದೋಚ್ತಾರೆ. ಜಾಹೀರಾತು ಕ್ಲಿಕ್ ಮಾಡಿ ಮೋಸ ಹೋಗಬೇಡಿ. ನಿಮ್ಮ ಅಕೌಂಟ್ ಗೆ ಕನ್ನ ಹಾಕುವವರ ಐಡಿಯಾಗಳೇ ಭಯ ಬೀಳಿಸುತ್ತೆ. ನಿಮ್ಮ ಬರಹಕ್ಕೆ ಅವರೇ ಹಣ ಕೊಟ್ಟು ಆಮೇಲೆ ನಿಮ್ಮ ಅಕೌಂಟ್ ಗೆ ಕನ್ನ ಹಾಕ್ತಾರೆ. ನಿಮ್ಮ ಮೇಲೆ ಕೇಸಿದೆ, ನಿಮಗೊಂದು ಪಾರ್ಸೆಲ್ ಬಂದಿದೆ ಅಂತ ಮೋಸ ಮಾಡ್ತಾರೆ. ಇಂತಹ ಸೈಬರ್ ಕ್ರೈಮ್ ಗಳ ಬಗ್ಗೆ ಎಚ್ಚರ ಇರಲಿ ಎಂದರು.