ಮಂಗಳೂರು,ಮೇ 26 (DaijiworldNews/AK): ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್ಎಲ್ಪಿಎಸ್-1 18 ಎಂಜಿಡಿ ರೇಚಕ ಸ್ಥಾವರದ ಪಂಪಿಂಗ್ ಮಾಡುವ ಕೊಟ್ಟಾರ ಚೌಕಿಯಿಂದ ಗೊಲ್ಡ್ ಪಿಂಜ್ ಗೌರಂಡ್ ವರೆಗೆ ಕೆಯುಐಡಿಎಫ್ಸಿ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆ ಮರುಜೋಡಣೆ ಕಾಮಗಾರಿ ಮಾಡಲು ಮೇ.30 ರಿಂದ ಮೇ 31ರವರೆಗೆ ಬೆಳಗ್ಗೆ 6 ಗಂಟೆವರೆಗೆ ನಡೆಯಲಿದೆ ನಡೆಯಲಿದೆ.
ಈ ಹಿನ್ನಲೆ ಸುರತ್ಕಲ್, ಕಾಟಿಪಳ್ಳ, ಕೂಳೂರು,ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ ಕಾನ, ಬಾಳಾ, ಕುಳಾಯಿ, ಮೂಡಾ ಪಂಪ್ ಹೌಸ್, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.