ಉಡುಪಿ, ಮೇ 27 (DaijiworldNews/MS): ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಉಪ್ಪೂರಿನ ಕೆ.ಜಿ.ರಸ್ತೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಟೂರಿಸ್ಟ್ ಬಸ್ ಸೇತುವೆಯಿಂದ ಢಿಕ್ಕಿ ಹೊಡೆದ ಘಟನೆ ಇಂದು ನಡೆದಿದೆ.
ಟೂರಿಸ್ಟ್ ಬಸ್ ಉಡುಪಿಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಉಪ್ಪೂರಿನ ಸೇತುವೆಯ ಮೇಲೆ ಸಂಚರಿಸುವಾಗ ತಾಂತ್ರಿಕ ದೋಷದಿಂದ ವಾಹನದ ಸ್ಟೇರಿಂಗ್ ಲಾಕ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.
ಘಟನೆಯಲ್ಲಿ ಸೇತುವೆಯ ಸುರಕ್ಷತಾ ಗೋಡೆಗೆ ತೀವ್ರ ಹಾನಿಯಾಗಿದೆ. ಸೇತುವೆಯ ಕೆಳಗೆ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.