ಉಡುಪಿ, ಮೇ 26 (DaijiworldNews/AK): ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19 ರಂದು ಮುಂಜಾನೆ ಸಂಭವಿಸಿದ ಗ್ಯಾಂಗ್ ವಾರ್ ಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ.
ಪ್ರಮುಖ ಆರೋಪಿಗಳಾದ ಕಾಪು ಕೊಂಬಗುಡ್ಡೆಯ ಆಶಿಕ್ (26), ತೋನ್ಸೆ ಹೂಡಾದ ರಕೀಬ್ (21) ಮತ್ತು ಸಾನ್ (26) ಅವರನ್ನು ಮೇ 25 ರಂದು ಪೊಲೀಸರು ಬಂಧಿಸಿದ್ದಾರೆ. ಉನ್ನತ ಅಧಿಕಾರಿಗಳ ಪ್ರಕಾರ, ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಘಟನೆಯ ವೀಡಿಯೊದಲ್ಲಿ ಕಂಡು ಬರುವ ಕಾರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಷರೀಫ್ ಇತ್ತೀಚೆಗೆ ಬಂಧಿಸಲಾದ ಮೂವರಲ್ಲಿ ಸೇರಿದ್ದಾರೆ. ಅವರು ಈಗಾಗಲೇ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.