ಮಂಗಳೂರು, ಮೇ.25 (DaijiworldNews/AA): ಹರೀಶ್ ಪೂಂಜಾ ಅವರನ್ನು ಎಂಎಲ್ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ? ಎಂಎಲ್ ಎ ಆದ್ರೆ ಪೊಲೀಸ್ ಮೇಲೆ ಗಲಾಟೆ ಮಾಡಬಹುದಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ನ ಒತ್ತಡ ಅಂದರೆ ಏನು? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಹರೀಶ್ ಪೂಂಜಾ ಅವರ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ನಾನ್ ಬೇಲೆಬಲ್ ಅಫೆನ್ಸ್ ಇದೆ. ಈ ಪ್ರಕರಣ ಬೇಲೆಬಲ್ ಅಫೆನ್ಸ್ ಅಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ. ಅವರ ಮೇಲೆ ಎರಡು ಎಫ್ಐಆರ್ ಇದೆ. ಅದು ಜಾಮೀನು ರಹಿತ ಅಪರಾಧವಾಗಿರುತ್ತದೆ. ಶಾಸಕ ಪೂಂಜಾ ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.