ಕಾಸರಗೋಡು: ಕಾರಡ್ಕ ಕೃಷಿ ಸಹಕಾರಿ ಸಂಘಕ್ಕೆ ಸುಮಾರು 4.67 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಬ್ಯಾಂಕ್ನಲ್ಲಿ ಅಡವಿರಿಸಿದ 48.5 ಲಕ್ಷ ರೂ. ಚಿನ್ನವನ್ನು ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿದೆ.
ಕೋ-ಆಪರೇಟಿವ್ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್ ಕಮಿಟಿ ಸದಸ್ಯ ರತೀಶನ್ ಲಪಟಾಯಿಸಿ ಕೇರಳ ಬ್ಯಾಂಕ್ನಲ್ಲಿ ಚಿನ್ನ ಅಡವಿರಿಸಿದ್ದ. ಆರೋಪಿ ರತೀಶನ್ ಹಾಗೂ ಸೂತ್ರಧಾರ ಕಣ್ಣೂರು ನಿವಾಸಿ ಜಬ್ಟಾರ್ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಪಂಚಾಯತ್ ಸದಸ್ಯ ಬೇಕಲ ಹದ್ದಾದ್ ನಗರದ ಕೆ.ಅಹಮ್ಮದ್ ಬಶೀರ್, ಪರಕ್ಲಾಯಿ ಏಳನೇ ಮೈಲಿನ ಎ. ಅಬ್ದುಲ್ ಗಫೂರ್, ಕಾಂಞಂಗಾಡ್ ನೆಲ್ಲಿಕ್ಕಾಡ್ನ ಎ. ಅನಿಲ್ ಕುಮಾರ್ನನ್ನು ಬಂಧಿಸಲಾಗಿದ್ದು ಕ್ರೈಂಬ್ರಾಂಚ್ ಕಸ್ಟಡಿಯಲ್ಲಿದ್ದಾರೆ.
ಈ ವಂಚನೆಗೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಕರೆದೊಯ್ದು ಕೇರಳ ಬ್ಯಾಂಕ್ನ ಕಾಂಞಂಗಾಡ್ ಶಾಖೆಯಲ್ಲಿ ನಡೆಸಿದ ಮಾಹಿತಿ ಸಂಗ್ರಹ ವೇಳೆ ಅಡವಿರಿಸಿದ ಚಿನ್ನವನ್ನು ವಶಪಡಿಸಲಾಯಿತು.ಅಲ್ಲಿ ಅನಿಲ್ ಕುಮಾರ್ ಮತ್ತು ಅಬ್ದುಲ್ ಗಫೂರ್ ಹೆಸರಿನಲ್ಲಿ ಚಿನ್ನವನ್ನು ಅಡವಿರಿಸಲಾಗಿತ್ತು.ಚಿನ್ನ ಅಡವಿರಿಸಿ ಲಭಿಸಿದ ಎಲ್ಲ ಮೊತ್ತವನ್ನು ರತೀಶನ್ ಪಡೆದುಕೊಂಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.