ಉಡುಪಿ, ಮೇ 24 (DaijiworldNews/AK):ಪೆರ್ಡೂರು ಸಮೀಪದ ಪಾಡಿಗಾರ ಎಂಬಲ್ಲಿ ಚಿತ್ರದುರ್ಗದಿಂದ ಮಂಗಳೂರಿಗೆ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಕಾರೊಂದು , ಚಾಲಕನ ನಿದ್ದೆ ಮಂಪರಿಗೆ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ಸಿಲುಕಿದ ಘಟನೆ ಮುಂಜಾನೆ ನಡೆದಿದೆ.
ಅದೇ ದಾರಿಯಲ್ಲಿ ಮಲ್ಪೆ ಬೀಚ್ ಗೆ ಬರುತ್ತಿದ್ದ ಈಶ್ವರ್ ಮಲ್ಪೆಯವರ ಸ್ನೇಹಿತರಾದ ಭದ್ರಾವತಿಯ ಸ್ನೇಕ್ ಜೋಸ್ವಾ ಹಾಗೂ ಅವರ ತಂಡವು ಇವರನ್ನು ಗಮನಿಸಿದೆ. ರೋಗಿಯನ್ನು ಹನಿಹನಿ ಮಳೆಗೆ ರಸ್ತೆಯಲ್ಲಿಯೇ ಮಲಗಿಸಿದ್ದನ್ನು ಕಂಡು ತಕ್ಷಣ ಈಶ್ವರ್ ಮಲ್ಪೆಯವರಿಗೆ ಸ್ನೇಕ್ ಜೋಸ್ವಾ ರವರು ಕರೆ ಮಾಡಿದ್ದಾರೆ.
ಕರೆಗೆ ಸ್ಪಂದಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು , ಪೆರ್ಡೂರು ಪಾಡಿಗಾರಕ್ಕೆ ತಲುಪಿ ರೋಗಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಉಚಿತ ಸೇವೆಯ ಮೂಲಕ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ