ಕುಂದಾಪುರ, ಮೇ 24 (DaijiworldNews/ AK): ಕುಂದಾಪುರ ತಾಲೂಕು ಆಸ್ಪತ್ರೆ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದಲ್ಲದೇ ಆಸ್ಪತ್ರೆ ಕೊಳಚೆ ನೀರಿನಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ ಸ್ಥಳೀಯ ನಿವಾಸಿ ರತ್ನಾಕರ ಶೆಟ್ಟಿ ಹಾಗೂ ನೆರೆಕರೆಯವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಕೊಳಚೆ ನೀರನ್ನು ಯಾವುದೇ ಶುಚಿಗೊಳಿಸದೇ ನೇರವಾಗಿ ರಸ್ತೆ ಬದಿಯ ಸಾರ್ವಜನಿಕ ತೋಡಿಗೆ ಹರಿ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಸ್ಪತ್ರೆಯ ಹಿಂಭಾಗದಲ್ಲಿರುವ ಸಾರ್ವಜನಿಕ ಚರಂಡಿಯನ್ನೂ ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರೀ ಆಸ್ಪತ್ರೆಯ ಅಪರೇಶನ್ ಕೊಠಡಿಯಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ನೀಡುವ ಸಂಪರ್ಕ ಅಧಿಕಾರಿ ಇರುವುದಿಲ್ಲ, ನಿಯೋಜಿತ ವೈದ್ಯಾಧಿಕಾರಿ, ಕರ್ತವ್ಯ ನಿರ್ವಹಿಸದೆ ಆಸ್ಪತ್ರೆಯನ್ನು ಅವ್ಯವಸ್ಥೆಗೊಳಿಸಿದ್ದು, ತಕ್ಷಣ ಆಡಳಿತ ಮಂಡಳಿ ಮುಖ್ಯಸ್ಥರನ್ನು ಬದಲಾಯಿಸಬೇಕು ಆಗ್ರಹಿಸಿದ್ದಾರೆ.
ಉತ್ತಮ ಆಡಳಿತ ನಿರ್ವಹಣೆ ಮಾಡುವ ವೈದ್ಯಾಧಿಕಾರಿಯನ್ನು ನೇಮಿಸಬೇಕಾಗಿ ಜಿಲ್ಲಾ ಮುಖ್ಯಸ್ಥ ವೈದ್ಯಾಧಿಕಾರಿಯಲ್ಲಿ ನಮ್ಮ ಮನವಿಯನ್ನು ಸಲ್ಲಿಸುತ್ತೇವೆ. ಅತೀ ಶಿಘ್ರವಾಗಿ ಸಾರ್ವಜನಿಕರ ಈ ಅಹವಾಲನ್ನು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ನೀವೆ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.