ಕುಂದಾಪುರ, ಮೇ 23 (DaijiworldNews/AK): ಮೆಣಸಿನ ವ್ಯಾಪಾರ ಮುಗಿಸಿ ಬರುತ್ತಿದ್ದ ವೇಳೆ ಊಟಕ್ಕೆಂದು ವಾಹನ ನಿಲ್ಲಿಸಿ ಹೋಟೇಲಿಗೆ ಹೋದ ಸಂದರ್ಭ ಕಾರಿನಲ್ಲಿಟ್ಟ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಅಪರಿಚಿತರು ಕದ್ದೊಯ್ದ ಘಟನೆ ಸಿದ್ದಾಪುರ ಪೇಟೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಮಹಮ್ಮದ್ ರಫಿ(43) ಎಂಬುವವರು ಹಣ ಕಳೆದುಕೊಂಡವರು. ಇವರು ಎಪ್ರಿಲ್ 29ರಂದು ಬ್ರಹ್ಮಾವರದ ಸಂತೆಯಲ್ಲಿ ಮೆಣಸಿನ ವ್ಯಾಪಾರವನ್ನು ಮಾಡಿ ತನ್ನ ಕೆಲಸದವರೊಂದಿಗೆ KA-15-A-4201 ನೇ ವಾಹನದಲ್ಲಿ ವಾಪಾಸ್ಸು ಊರಿಗೆ ಹೊಗುತ್ತಿರುವಾಗ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರ ಪೇಟೆಯಲ್ಲಿನ ಶಿಶಿಲ ಹೋಟೆಲ್ ಬಳಿ ವಾಹನವನ್ನು ನಿಲ್ಲಿಸಿ ಊಟಕ್ಕೆ ಹೋದಾಗ ರಾತ್ರಿ 9:45 ಗಂಟೆಗೆ ಘಟನೆ ಹಣ ದೋಚಿದ್ದಾರೆ.
ಒಣ ಮೆಣಸಿನ ವ್ಯಾಪಾರ ಮಾಡಿ ವಾಹನದ ಹಿಂದುಗಡೆ ಇರಿಸಿದ್ದ 4,50,000 ರೂಪಾಯಿಯನ್ನು ಯಾರೋ ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಬಂದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.