ಉಡುಪಿ, ಮೇ.22 (DaijiworldNews/AK):ರಘುಪತಿ ಭಟ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಸುಮಾರು 30 ವರ್ಷಗಳಿಂದ ಅವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅವರು ನಿರೀಕ್ಷೆಗಳನ್ನು ಹೊಂದಿದ್ದರೂ ಪಕ್ಷದ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ" ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಕೌಂಟರ್ ಕೊಟ್ಟಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರ ರಘುಪತಿ ಭಟ್ ಬಂಡಾಯ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೆಳೆಯರ ನಡುವೆ ಮಾತಿನ ವರಸೆ ಆರಂಭವಾಗಿದೆ. ಈ ಹಿಂದೆ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ಬಗ್ಗೆ ಪರೋಕ್ಷವಾಗಿ ರಘಪತಿ ಭಟ್ ಬೇಸರ ವ್ಯಕ್ತಪಡಿಸಿದ್ದರು.
ಈ ಹಿಂದೆ, ತಮ್ಮ ಹಿರಿಯ ಸಹೋದ್ಯೋಗಿಯ ಮೇಲಿನ ಗೌರವವನ್ನು ಉಳಿಸಿಕೊಂಡು ಭಟ್ ಅವರ ಕಾಮೆಂಟ್ಗಳಿಗೆ ಕೌಂಟರ್ ನೀಡಿದ ಸುವರ್ಣ ಅವರ ಬಗ್ಗೆ ರಘುಪತಿ ಭಟ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಕೌಂಟರ್ ನೀಡಿದ ಯಶ್ ಪಾಲ್, ರಘುಪತಿ ಭಟ್ ಬಗ್ಗೆ ನನಗೆ ಗೌರವ ಇದೆ.
ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿ ಮೂರು ದಶಕಗಳ ಕಾಲ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾರಿ ನಿಭಾಯಿಸಿದ್ದಾರೆ.ಅವರು ಅಪೇಕ್ಷೆಪಟ್ಟಿರಬಹುದು ಆದರೆ ಪಕ್ಷದ ವರಿಷ್ಠ ತೀರ್ಮಾನಕ್ಕೆ ನಾವು ಬದ್ಧ ಎಂದರು.ನಾನು ಕೂಡ ಉಡುಪಿ ಶಾಸಕನಾಗುವ ಅಪೇಕ್ಷೆಪಟ್ಟವನಲ್ಲ. ಪಕ್ಷ ಘೋಷಣೆ ಮಾಡಿದಾಗ ಒಪ್ಪಿಕೊಂಡು ಸ್ಪರ್ಧಿಸಿದೆ. ಉಡುಪಿಯ ಇತಿಹಾಸದಲ್ಲಿ ವಿಧಾನಸಭೆಯಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದೆ. ನನ್ನ ಚುನಾವಣೆಗೆ ರಘುಪತಿ ಸಾಕಷ್ಟು ಕೆಲಸ ಮಾಡಿದ್ದರು. ನಾನು ಕೂಡ ಅವರ ಚುನಾವಣೆಗಳಲ್ಲಿ ಒಡಹುಟ್ಟಿದ ತಮ್ಮನಂತೆ ಕೆಲಸ ಮಾಡಿದ್ದೇನೆ. ಅವರ ಗೆಲುವಿಗೆ ಶಕ್ತಿಮೀರಿ ಸಹಕಾರ ನೀಡಿದ್ದೇನೆ. ಅವರು ಒತ್ತಡದಿಂದ ಹೇಳಿಕೆಗಳನ್ನು ನೀಡಿರಬಹುದು ಎಂದು
55 ವರ್ಷ ಪ್ರಾಯದೊಳಗೆ ಅತಿ ಹೆಚ್ಚು ಅಧಿಕಾರ ಅನುಭವಿಸಿದ್ದಾರೆ.20 ವರ್ಷ ನಿರಂತರವಾಗಿ ಶಾಸಕ, ನಗರಸಭಾ ಸದಸ್ಯ ಹಾಗೂ ಪಕ್ಷದ ವಿವಿಧ ಹುದ್ದೆ ಅಲಂಕರಿಸಿದ್ದಾರೆ.ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಪಕ್ಷಕ್ಕಿಂತ ದೇಶ ದೊಡ್ಡದು. ಅಧಿಕಾರವನ್ನು ಸ್ವಾರ್ಥಕ್ಕೆ ಬಳಸದೆ ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಭಟ್ಗೆ ತಿರುಗೇಟು ನೀಡಿದ್ದಾರೆ.
ನಾನು ಒಬ್ಬಂಟಿಯಾಗಿ ಇರುವವನು ನನ್ನ ಜೀವನಕ್ಕೆ ಬೇಕಾದ ಆದಾಯ ನನಗೆ ಉದ್ಯಮದಿಂದ ಬರುತ್ತದೆ. ಯಾರ ಮುಂದೆ ಕೈ ಚಾಚಿ ರಾಜಕಾರಣ ಮಾಡುವ ಅಗತ್ಯ ನನಗೆ ಇಲ್ಲ.ಯಾವುದೇ ಅಕ್ರಮಗಳಿಗೆ ನನ್ನ ಶಾಸಕತ್ವದ ಅವಧಿಯಲ್ಲಿ ಸಾಥ್ ನೀಡಿಲ್ಲ. ಹಿರಿಯರು ಮನವೊಲಿಸಬಹುದು. ರಘುಪತಿ ಭಟ್ಟರು ನಾಮಪತ್ರ ಹಿಂದಕ್ಕೆ ಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರಂತರ ಅಧಿಕಾರದಲ್ಲಿರುವ ದುರಾಸೆ ನನಗೆ ಇಲ್ಲ.ನನ್ನ ಅವಧಿಯಲ್ಲಿ ಸಾಕಷ್ಟು ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತೇನೆ. ಸುಧೀರ್ಘ ಅವಧಿಯಲ್ಲಿ ರಘುಪತಿ ಭಟ್ ಸಾಕಷ್ಟು ಅಧಿಕಾರ ಪಡೆದಿದ್ದಾರೆ. ರಘುಪತಿ ಭಟ್ಟರು ಟೆನ್ಶನ್ ನಲ್ಲಿ ಮಾತನಾಡಿರಬಹುದು, ಆದರೆ ನನಗೆ ಬೇಸರವಾಗಿದೆ ಎಂದರು.
ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂಬ ರಘುಪತಿ ಭಟ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸುವರ್ಣ, ಶಾಸಕರಾದ ಮೇಲೆ ನಾನು ಸರಕಾರದ ಯಾವುದೇ ಯೋಜನೆಗಳಿಗೆ ಶಿಲಾನ್ಯಾಸ ಮಾಡಿಲ್ಲ. ಆಮಂತ್ರಣ ತಯಾರಿಸುವಾಗ ಸರ್ಕಾರ ಪ್ರೋಟೋಕಾಲ್ ನೋಡುತ್ತದೆ. ಜನಪ್ರತಿನಿಧಿಗಳನ್ನು ಮಾತ್ರ ಆಹ್ವಾನ ಮಾಡಲು ಅವಕಾಶ ಇರುತ್ತದೆ. ಶಾಸಕರ ಅನುದಾನದ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಿದ್ದೇನೆ. ಶಾಸಕರಾಗಿದ್ದವರು ಅವರು ಭಾವುಕರಾಗಿ ಮಾತನಾಡಿರಬಹುದು. ನಾನು ಎಲ್ಲಾ ಹಿರಿಯರಿಗೆ ಗೌರವ ನೀಡುವ ಸ್ವಯಂಸೇವಕ ವೈಯಕ್ತಿಕ ಸಮಸ್ಯೆಗಳಿಂದ ಅವರು ಕಷ್ಟದಲ್ಲಿದ್ದಾಗಲೂ ಅವರ ಪರವಾಗಿ ನಾನು ಕೆಲಸ ಮಾಡಿದ್ದೇನೆ. ಅವರಿಗೆ ಪ್ರಾಮಾಣಿಕವಾಗಿ ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ ಎಂದು ನುಡಿದರು.
ಶಾಸಕರ ಕಚೇರಿಗೆ ನಾನು ಜವಾಬ್ದಾರಿಯುತ ವ್ಯಕ್ತಿ. ಪಕ್ಷದ ಜಿಲ್ಲಾ ಕಚೇರಿಗೆ ಅಧ್ಯಕ್ಷರು ಜವಾಬ್ದಾರಿ. ವೈಯಕ್ತಿಕವಾಗಿ ನನಗೆ ಹೇಳಿದರೆ ನಾನು ಖಂಡಿತ ಸಮಸ್ಯೆ ಬಗೆಹರಿಸುತ್ತಿದ್ದೆ. ಮಾಜಿ ಶಾಸಕರು ಸಚಿವರ ಫೋಟೋ ಅಳವಡಿಸುವ ಪದ್ಧತಿ ಇಲ್ಲ.ನಾನು ಅವರ ಜೊತೆಗೆ ಬೆಳೆದವ ಏನಾದರೂ ಇದ್ದರೆ ನನ್ನ ಬಳಿ ನೇರವಾಗಿ ಹೇಳಬಹುದು.ಪಕ್ಷದ ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು ನಾನು ಕೊಟ್ಟಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.