ಬಜ್ಪೆ,ಮೇ,08 (Daijiworld News/MSP): ಅದ್ಯಪಾಡಿ ಅಣೆಕಟ್ಟೆಯ ಬಳಿ ಫಲ್ಗುಣಿ ನದಿಯಲ್ಲಿ ಮರ್ವಾಯಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತರು ಮೂಡುಶೆಡ್ಡೆ ಎದುರುಪದವಿನ ನಿವಾಸಿ ಶಂಕರ ಪೂಜಾರಿ (49) ಮೃತಪಟ್ಟವರು. ನದಿಯಲ್ಲಿ ಮರ್ವಾಯಿ ಹೆಕ್ಕಿ ಗೋಣಿಚೀಲದಲ್ಲಿ ತುಂಬಿಸಿ, ಮನೆಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಪೂಜಾರಿ ಅವರು ಕಾಲು ಜಾರಿ ನದಿಗೆ ಬಿದ್ದರು. ಈಜಲು ಬಾರದ ಅವರು, ಮುಳುಗಿ ಮೃತಪಟ್ಟಿದ್ದಾರೆ.
ಪೂಜಾರಿಯೊಂದಿಗಿದ್ದ ದಾಮೋದರ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹ ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಶಂಕರ ಪೂಜಾರಿ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.