ಮಂಗಳೂರು ನ 21:ಡಿಸೆಂಬರ್ ತಿಂಗಳು ಬಂತೆಂದ್ರೆ ಕ್ರಿಸ್ ಮಸ್ ಹಬ್ಬದ ಸಡಗರ.. ಈ ಹಬ್ಬದಲ್ಲಿ ಪ್ಲಮ್ ಕೇಕ್ ಗಳು ಅತಿ ಪ್ರಮುಖ ಖಾದ್ಯ . ಹೀಗಾಗಿ ನಗರದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯ ಸೋಮವಾರ ಚಾಲನೆ ದೊರೆಯಿತು. ಸಾಂಪ್ರದಾಯಿಕ ಪ್ಲಮ್ ಕೇಕ್ ತಯಾರಿಸಲು ಚೆರ್ರಿ,ಒಣದ್ರಾಕ್ಷಿ, ಕರ್ಜೂರ,ಗೋಡಂಬಿ, ಎಲಕ್ಕಿ ಮೊದಲಾದ ಡ್ರೈ ಪ್ರೂಟ್ಸ್ ಗಳನ್ನು ಒಂದು ತಿಂಗಳ ಮುಂಚಿತವಾಗಿ ಕೇಕ್ ಗೆ ಬಳಸುವ ಅಲ್ಕೋಹಾಲ್ ನಲ್ಲಿ ಮಿಕ್ಸ್ ಮಾಡಿ ಸ್ಟೋರೆಜ್ ನಲ್ಲಿ ಇಡಲಾಗುತ್ತದೆ. ಹಾಗಾಗಿ ಈ ಬಾರಿ ತಯಾರಾಗುವ ಕೇಕ್ ನಲ್ಲಿ 50 ಕೆ.ಜಿ ಡ್ರೈ ಫ್ರುಟ್ಸ್ ಬಳಸಲಾಗುತ್ತಿದೆ.
ಮಣಿಪಾಲ್ ಗ್ಲೋಬಲ್ ಎಜುಕೇಶನ್ ಚೇರ್ಮನ್ ಟಿ.ವಿ ಮೋಹನ್ ದಾಸ್ ಪೈ,ಓಷಿಯನ್ ಪರ್ಲ್ ಹೋಟೆಲ್ ನ ಉಪಾಧ್ಯಕ್ಷ ಬಿ.ಎನ್ ಗಿರೀಶ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಈ ಕೇಕ್ ಮಿಕ್ಸಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.