ಬೆಳ್ತಂಗಡಿ, ಮೇ. 21(DaijiworldNews/AK): ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದ್ದೇ ಆದರೆ, ಇನ್ನು ಮುಂದೆಯೂ ಪೊಲೀಸರ ಕಾಲರ್ ಹಿಡಿಯಲು ನಾನು ಸಿದ್ಧ. ಜೈಲಿನಲ್ಲಿ ಕುಳಿತುಕೊಳ್ಳಲೂ ನಾನು ಸಿದ್ಧ ಎಂದು ಶಾಸಕ ಹರೀಶ್ ಪೂಂಜ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಪಕ್ಷದ ಯುವ ಮೋರ್ಚಾದ ಶಶಿರಾಜ್ ಶೆಟ್ಟಿ ಬಂಧನವನ್ನು ಖಂಡಿಸಿ , ಹಾಗೂ ಪೊಲೀಸರಿಗೆ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಮಾತನಾಡಿದ ಪೂಂಜಾ, ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಬೆಳ್ತಂಗಡಿ ತಹಸೀಲ್ದಾರ್ ಮತ್ತು ಬೆಳ್ತಂಗಡಿ ಠಾಣೆ ಪೊಲೀಸರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ . ಬೆಳ್ತಂಗಡಿ ಠಾಣೆ ಇನ್ಸ್ ಪೆಕ್ಟರ್ ಮತ್ತು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂದಿಸಿದ್ದು , ಇವರು ಕಾಂಗ್ರೆಸ್ ಎಜೆಂಟ್ ನಂತೆ ವರ್ತಿಸುತ್ತಿದ್ದರೆ ಎಂದು ಆರೋಪಿದ್ದಾರೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯು ಒಬ್ಬ ಶಾಸಕ ಮಾಡಿದ ಕರೆಯನ್ನು ಸ್ವೀಕರಿಸುವುದಿಲ್ಲ ಎಂದಾದರೆ ನೀವು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುವವರು ಎಂದರ್ಥ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ವಿನಾ ಕಾರಣ ಒಳಗೆ ಕುಳ್ಳಿರಿಸುವಾಗ ನಾನು ಆಕ್ರೋಶದಲ್ಲಿಯೇ ಮಾತನಾಡುತ್ತೇನೆ. ಅಧಿಕಾರಯುತವಾಗಿಯೇ ಮಾತನಾಡುತ್ತೇನೆ. ನಿರಪರಾಧಿಗೆ ಶಿಕ್ಷೆ ಆಗದ ಹಾಗೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಪೂಂಜಾ ಆಕೋಶ್ರ ವ್ಯಕ್ತಪಡಿಸಿದ್ದಾರೆ.