ಬಂಟ್ವಾಳ, ಮೇ 08(Daijiworld News/SM): ದೇಶದ ಹಿರಿಯ ಹೋರಾಟಗಾರ, ಡಾ. ಅಣ್ಣ ಹಜಾರೆಯವರನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ನಿಯೋಗ ಮಂಗಳವಾರ ಪುಣೆಯ ರಾಲೇಗಾನ್ ಸಿದ್ದಿಯಲ್ಲಿ ಭೇಟಿ ಮಾಡಿತು.
ರಾಜ್ಯದ್ಯಂತ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ರಾಜ್ಯ ಸಮಿತಿ ದೇಶಾದ್ಯಂತ ಏಕರೂಪದ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಯನ್ನು ಸಿದ್ದಪಡಿಸಿದ್ದು, ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಅಣ್ಣಾ ಹಜಾರೆಯವರೊಂದಿಗೆ ಚರ್ಚಿಸಿದರು.
ಸರಕಾರಿ ಶಾಲೆ ಉಳಿಸಿ ಬೆಳಿಸಿ ರಾಜ್ಯ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅಣ್ಣಾಹಜಾರೆ ಸಮಿತಿಯ ಮುಂದಿನ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಜನರು ಮಾಲೀಕರು, ನಾವು ಆರಿಸಿ ಕಳುಸಿದ ಪ್ರತಿನಿಧಿಗಳು ಸೇವಕರು. ಆದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ವ್ಯತಿರಿಕ್ತವಾಗಿದೆ. ಜನರು ಸಂಘಟಿತರಾದಗ ಮಾತ್ರ ಯಾವುದೇ ಹೋರಾಟ ಯಶಸ್ವಿಯಾಗಲು ಸಾಧ್ಯವಿದೆ ಎಂದರು.