ಕಾಸರಗೋಡು, ,ಮೇ 20(DaijiworldNews/AK): ಮನೆಗೆ ನುಗ್ಗಿದ ಕಳ್ಳರು 9 ಪವನ್ ಚಿನ್ನಾಭರಣ, 9 ಲಕ್ಷ ರೂ.ನಗದನ್ನು ಕಳವುಗೈದ ಘಟನೆ ಮಂಜೇಶ್ವರ ಸಮೀಪದ ಪಾವೂರು ಮಚ್ಚಂಪಾಡಿ ಯಲ್ಲಿ ನಡೆದಿದೆ.
ಮಚ್ಚಂಪಾಡಿ ಸಿ. ಎಂ ನಗರದ ಗಾಲ್ಫ್ ಉದ್ಯೋಗಿ ಖಲೀಲ್ ರವರ ಮನೆಯಲ್ಲಿ ಕಳ್ಳತನ ನಡೆದಿದೆ. ಖಲೀಲ್ ಮತ್ತು ಕುಟುಂಬಸ್ಥರು ಆರು ತಿಂಗಳ ಹಿಂದೆ ಗಲ್ಫ್ ಗೆ ತೆರಳಿದ್ದರು. ಶನಿವಾರ ಖಲೀಲ್ ಮೊಬೈಲ್ ನಲ್ಲಿ ಸಿಸಿಟಿವಿ ದೃಶ್ಯ ವೀಕ್ಷಿಸಲು ಯತ್ನಿಸಿದಾಗ ಆಫ್ ಆಗಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡು ನೆರೆ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದು, ಮನೆಗೆ ಬಂದು ಗಮನಿಸಿದಾಗ ಬಾಗಿಲು ಮುರಿದಿರುವುದು ಕಂಡು ಬಂದಿದೆ .
ಸಿಸಿಟಿವಿ ಕ್ಯಾಮರಾಗಳನ್ನು ಹಾಳು ಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪಾಟು ಗಳನ್ನು ಮುರಿದು ನಗ ನಗದನ್ನು ಕಳವುಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಸಮೀಪದ ಗೇರು ಕಟ್ಟೆ ಯಲ್ಲಿ ಕಾಸಿಂ ಎಂಬವರ ಮನೆಯಲ್ಲಿ ಕಳವು ಯತ್ನ ನಡೆದಿದೆ. ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಈ ಮನೆಯಲ್ಲಿ ಕಳ್ಳರ ಚಿತ್ರ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ಮಾಹಿತಿ ಕಲೆ ಹಾಕಿದ್ದಾರೆ .