ಉಡುಪಿ, ಮೇ 07(Daijiworld News/SM): ಬಜೆ ಅಣೆಕಟ್ಟೆಯ ನೀರನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ತಕ್ಷಣ ಜಿಲ್ಲಾಡಳಿತ ಟ್ಯಾಂಕರ್ ನೀರು ಪೂರೈಸಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ನೀರು ನಿರ್ವಹಣೆ ಮಾಡಿದ್ದರೆ ಬಜೆ ಅಣೆಕಟ್ಟೆಯ ನೀರು ಕನಿಷ್ಠ ಮುಂದಿನ 40 ದಿನಗಳ ಕಾಲ ಬಳಸಬಹುದಿತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದೆ. ಮಳೆ ಬರುವವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸುವುದೇ ಏಕೈಕ ಮಾರ್ಗ ಎಂದರು.