ಮಂಗಳೂರು, ಮೇ 19(DaijiworldNews/AA): ಹೆಚ್ಚಿನ ಲಾಭದ ಆಮಿಷ ಒಡ್ಡಿ ಹೂಡಿಕೆ ನೆಪದಲ್ಲಿ 30,40,000 ರೂ. ವರ್ಗಾಯಿಸಿಕೊಂಡು ವಂಚಿಸಿದ ಕುರಿತು ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಲಕ್ಷ್ಮೀನಾರಾಯಣ ಎಂಬುವವರು ಮೋಸ ಹೋಗಿದ್ದು, ಈ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ 'ನಾನು ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ಗ್ರೂಪ್ವೊಂದಕ್ಕೆ ಸೇರಿಕೊಂಡಿದ್ದೆ. ಅದರಲ್ಲಿ ಬರುವ ಷೇರು ಮಾರುಕಟ್ಟೆ ಹೂಡಿಕೆ ಕುರಿತ ಮಾಹಿತಿಗಳನ್ನು ನೋಡುತ್ತಿದ್ದೆ. ಆ ಗ್ರೂಪ್ನ ಅಡ್ಮಿನ್ಸ್ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದ್ದನು.
ಗ್ರೂಪ್ನ ಅಡ್ಮಿನ್ಸ್ ಹೇಳಿದ ಮಾತನ್ನು ನಂಬಿದ ನಾನು ಏ.24ರಿಂದ ಮೇ 15ರವರೆಗೆ ನನ್ನ ಬ್ಯಾಂಕ್ ಖಾತೆಯಿಂದ 30.40 ಲ.ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ಗೆ ಜಮೆ ಮಾಡಿ ಮೋಸ ಹೋಗಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.