ಮಂಗಳೂರು, ಮೇ. 18(DaijiworldNews/AA): ನಮ್ಮ ಪಕ್ಷದಲ್ಲಿ ಮುಂಚೆ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಹೋಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ನ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ. ನಾನು ಲೀಡರ್ ಗಳನ್ನ ಹಿಡಿದುಕೊಂಡಿರಲಿಲ್ಲ. ನಾನು ಕಾರ್ಯಕರ್ತರನ್ನ ಹಿಡಿದುಕೊಂಡಿದ್ದೇನೆ ಎಂದು ಪರಿಷತ್ ಚುನಾವಣೆಗೆ ಪಕ್ಷೇತರವಾಗಿ ನಾಮ ಪತ್ರ ಸಲ್ಲಿಸಿದ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯ ಮೂಲಕ ಪಧವೀಧರರ ಮತ ಯಾಚಿಸಿದ ರಘುಪತಿ ಭಟ್ ಅವರು, ನನ್ನ ಜಾತಕ ಸರಿ ಇಲ್ವಾ? ಆ ಕಾರಣದಿಂದ ನನಗೆ ಟಿಕೆಟ್ ಸಿಗ್ತಾ ಇಲ್ವಾ ಗೊತ್ತಿಲ್ಲ. ಈಶ್ವರಪ್ಪ ನವರ ಕಥೆ ಬೇರೆ ನನ್ನ ಕಥೆ ಬೇರೆ. ಪಕ್ಷದಿಂದ ಉಚ್ಚಾಟನೆ ಮಾಡಿದ್ರೆ ನನಗೆ ಬೇಸರವಗುತ್ತೆ. ಆದರೆ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವವರು ಬೇಕಾಗಿದೆ. ಗೆಲ್ಲಲಿ ಸೋಲಲಿ ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ಒಟ್ಟಾರೆ ಕರಾವಳಿಯವರು ಹೇಗೂ ವೋಟ್ ಹಾಕ್ತಾರೆ ಎಂದು ನಿರ್ಲಕ್ಷ್ಯ ಮಾಡೋದಲ್ಲ. ಉಚ್ಚಾಟನೆಯಾದರೆ ನಾನು ಕಾರ್ಯಕರ್ತನಾಗಿರುತ್ತೇನೆ. ಮೇ 20ರ ನಂತರ ಶೋಕಸ್ ನೋಟಿಸ್ ಬರಬಹುದು ಎಂದರು.
2004ರ ಪೂರ್ವ ಉಡುಪಿಯ ರಸ್ತೆಗಳಲ್ಲಿ ಎರಡು ಬಸ್ ಗಳು ಒಟ್ಟಿಗೆ ಪಾಸ್ ಆಗುವ ವ್ಯವಸ್ಥೆಯಿರಲಿಲ್ಲ. ವಿ ಎಸ್ ಆಚಾರ್ಯ ಮಾರ್ಗದರ್ಶನದಲ್ಲಿ ಚತುಷ್ಪತ ರಸ್ತೆ ಮೊದಲು ಆರಂಭ ಮಾಡಿದ್ದು ನಾನು. ಈ ಸಾಧನೆಯ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ. ಜನಪ್ರತಿನಿಧಿಯಾಗಿ 2001ರಿಂದ 2018ರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಉಡುಪಿ 2004 ರ ಮುಂಚೆ ಹೇಗಿತ್ತು, ಈಗ ಹೇಗಿದೆ ಅನ್ನೋದೇ ನನ್ನ ಕೆಲಸಕ್ಕೆ ಸಾಕ್ಷಿ. ಜೂನ್ 3ನೇ ತಾರೀಕು ನಡೆಯುವ ಚುನಾವಣೆಯಲ್ಲಿ ನನಗೆ ಮತ ಹಾಕಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಅವರು ಮತ ಯಾಚಿಸಿದ್ದಾರೆ.
ರಾಜ್ಯದ 224 ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ ಕ್ಷೇತ್ರ ಉಡುಪಿ. ನಾನು ಶಾಸಕನಾಗಿದ್ದಾಗ ಈ ಕೆಲಸಗಳಿಗೆ ಒತ್ತು ನೀಡಿದ್ದೇನೆ. 2023 ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎಲ್ಲಾ ತಯಾರಿ ಮಾಡಿದ್ದೆ. ನನಗೆ ಟಿಕೆಟ್ ನಿರಾಕರಿಸಲಾಯಿತು. ಆದರೆ ನಾನು ಪಕ್ಷ ನಿಷ್ಠೆ ಮರಿಯಲಿಲ್ಲ. ಟಿಕೆಟ್ ನೀಡದೆ ನನ್ನನ್ನ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿತ್ತು. ಆದರೂ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮ ವಹಿಸಿದ್ದೆ. ಆ ನಂತರವೂ ನಾನು ಬಿಜೆಪಿ ಪಕ್ಷದಲ್ಲಿದ್ದೆ. ಸಾಮಾಜಿಕ ನ್ಯಾಯಕ್ಕಾಗಿ ಯಶ್ ಪಾಲ್ ಸುವರ್ಣಗೆ ಎಂ ಎಲ್ ಎ ಟಿಕೆಟ್ ಬಿಟ್ಟು ಕೊಡಿ ಎಂದು ಪಕ್ಷದ ಹಿರಿಯರು ಹೇಳಿದ್ದರು. ನಿಮ್ಮ ನೆಗಟಿವ್ ಇಲ್ಲ ಕೇವಲ ಸಾಮಾಜಿಕ ನ್ಯಾಯಕ್ಕಾಗಿ ಎಂದು ಹೇಳಿದ್ದರು ಎಂದರು.
ನೈರುತ್ಯ ಪಧವೀಧರರ ಕ್ಷೇತ್ರದ ಸ್ಥಾನ ತೆರವಾದಗ ನನ್ನ ಪಕ್ಷದ ಹಿರಿಯರಲ್ಲಿ ನನಗೆ ಅವಕಾಶ ನೀಡಬೇಕು ಎಂದಿದ್ದೆ. ನನ್ನನ್ನ ರಾಜಕೀಯವಾಗಿ ಮುಗಿಸಲೇ ಬೇಕು ಎಂದರೆ ನನಗೆ ಪಧವೀಧರರ ಕೊಡಬೇಡಿ ಎಂದಿದ್ದೆ. ನೀವೇ ಸೂಕ್ತ, ಈ ಬಾರಿ ನಿಮಗೆ ಅನ್ಯಾಯವಗಲ್ಲ ಅಂದಿದ್ರು. ಆದರೆ ಬೈ ಎಲೆಕ್ಷನ್ ನಡೆಯಲಿಲ್ಲ. ಆ ಬಳಿಕ ಪರಿಷತ್ ಚುನಾವಣೆಯಲ್ಲಿ ಕರಾವಳಿಗೆ ಭಾಗಕ್ಕೆ ಶಿಕ್ಷಕರ ಕ್ಷೇತ್ರ, ಮಲೆನಾಡಿಗೆ ಪಧವೀಧರ ಕ್ಷೇತ್ರ ನೀಡುತ್ತೇವೆ ಅಂದಿದ್ರು. ನಿಮಗೆ ಅವಕಾಶ ನೀಡುತ್ತೇವೆ. ಕೆಲಸ ಶುರು ಮಾಡಿ ಎಂದಿದ್ದರು. ಲೋಕಸಭೆ ಚುನಾವಣೆ ನಂತರ ಘೋಷಣೆ ಮಾಡ್ತೇವೆ ಅಂದರು. ಧನಂಜಯ ಸರ್ಜಿಗೆ ಕೊಡಡಿದ್ರೆ ಲಿಂಗಾಯಿತಾ ಮತಗಳಿಗೆ ಹೊಡೆತ ಬೀಳುತ್ತೆ ಅಂದ್ರು. ನನ್ನನ್ನ ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಭಾರಿ ಮಾಡಿದರು. ಪರಿಷತ್ ಚುನಾವಣೆಗೆ ಸಹಕಾರ ಆಗಲಿ ಎಂದು ಮಾಡಿದ್ದಾರೆ ಅಂದುಕೊಂಡೆ. ಕೊನೆಯ ಕ್ಷಣದವರೆಗೂ ನಾನು ಬಿಜೆಪಿಗೆ ಕಚೇರಿಗೆ ಅಲೆದಾಡಿದ್ದೆ. ಶಿಕ್ಷಕರಿಗೆ ಮೇಲೆ ಕೊಟ್ಟ ಬಳಿಕ ಪಧವಿಧರ ಕರಾವಳಿಗೆ ಕೊಡುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನಾವು ಏನು ಮಾಡಿದ್ರು ಇಲ್ಲಿನ ಕಾರ್ಯಕರ್ತರು ಮತ ಹಾಕುತ್ತಾರೆ ಅನ್ನೋ ಭಾವನೆ ನಮ್ಮ ರಾಜ್ಯ ನಾಯಕರಿಗೆ ಬಂದಿದೆ ಎಂದು ತಿಳಿಸಿದರು.
ಹಿಂದುತ್ವದ ಆಧಾರದಲ್ಲಿ ಏನೇ ಮಾಡಿದ್ರು ಇಲ್ಲಿ ನಡೆಯುತ್ತೆ ಅನ್ನೋ ಭಾವನೆಯಿದೆ. ಶಿವಮೊಗ್ಗಕ್ಕೆ ಕೊಡಬೇಕು ಅಂದುಕೊಂಡಿದ್ರೆ ಅಲ್ಲೂ ಹಿರಿಯರು ಇದ್ದರು. ಅವರಿಗೆ ಕೊಡುತ್ತಿದ್ದರೂ ನಮಗೆ ಬೇಸರವಾಗ್ತಾಯಿರಲಿಲ್ಲ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಸೇರಿದವರು ಧನಂಜಯ ಸರ್ಜಿ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಶಾಂತಿಗಾಗಿ ನಡಿಗೆ ಸರ್ಜಿ ಫೌಂಡೇಶನ್ ನಿಂದಲೇ ಆಗಿದ್ದು. ಅದರಲ್ಲಿ ಕಮ್ಯುನಿಸ್ಟ್ ಹಾಗೂ ಸಂಘ ಪರಿವಾರದ ವಿರುದ್ಧ ಕೆಲಸ ಮಾಡುವವರು ಭಾಗವಹಿಸಿದ್ದರು. ಆಗ ಅವರ ತಯಾರಿ ಕಾಂಗ್ರೆಸ್ ಟಿಕೆಟ್ ಗಾಗಿ ನಡೆದಿತ್ತು. ಈಗೆಲ್ಲ ಜಾತಿ ಮೇಲೆ ಚುನಾವಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮಂತಹ ಸಣ್ಣ ಜಾತಿಗೆ ರಾಜಕೀಯ ಮಾಡೋದು ಬಹಳ ಕಷ್ಟವಿದೆ. ನನ್ನ ನೈತಿಕತೆಯಿಂದ ನಾನು ಪಕ್ಷದ ವಿರುದ್ಧ ಹೋಗಿದ್ದೇನೆ ಎಂದು ನನಗೆ ಅನಿಸಲ್ಲ. ನಾನು ಗೆದ್ದರೂ ಬಿಜೆಪಿ, ಗೆದ್ದ ಮೇಲೂ ನಾನು ಬಿಜೆಪಿ ಕಚೇರಿಗೆ ಹೋಗುತ್ತೇನೆ. ಸೋತರೂ ನನ್ನನ್ನು ಉಚ್ಚಾಟನೆ ಮಾಡಿದ್ರೂ,ನಾನು ಬಿಜೆಪಿ ಕಾರ್ಯಕರ್ತನ್ನಾಗಿ ಕೆಲಸ ಮಾಡುತ್ತೇನೆ. ಇದು ಸರ್ಕಾರ ರಚಿಸುವ ಚುನಾವಣೆಯಲ್ಲ. ಕರಾವಳಿಗೆ ಆದ ಅನ್ಯಾಯ, ಆಯ್ಕೆಯಲ್ಲಿ ತೆಗೆದುಕೊಂಡ ಮಾನ ದಂಡ. ಯಾರನ್ನೂ ಸೋಲಿಸಲು ನಾನು ನಿಲ್ತಾ ಇಲ್ಲ. ಶಾಸಕನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ ಅದೆ ರೀತಿ ಇಲ್ಲೂ ಗೆದ್ದು ಕೆಲಸ ಮಾಡುತ್ತೇನೆ. ವಿಧಾನ ಸಭೆಯಲ್ಲಿ 4 ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿದ್ರು. ಆದರೂ ನಾವು ಪಕ್ಷಕ್ಕೋಸ್ಕರ ದುಡಿದಿದ್ದೇವೆ, ಅಭ್ಯರ್ಥಿಗಳನ್ನ ಗೆಲ್ಲಿಸಿ ತಂದಿದ್ದೇವೆ. ಎರಡೆರಡು ಚುನಾವಣೆಯಲ್ಲಿ ಸೀಟ್ ನಿರಾಕರಿಸಿದಾಗ ಪಕ್ಷದ ಪರವಾಗಿ ಕೆಲಸ ಮಾಡಿದ್ದು ನಾನೊಬ್ಬನೇ. ಮೊನ್ನೆ ಘೋಷಣೆ ಯಾಗುವವರೆಗೂ ಜೀವ ಬಿಟ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.