ಕಿನ್ನಿಗೋಳಿ, ಮೇ 18 (DaijiworldNews/MS): ಮೀನು ಮಾರಾಟಗಾರರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದ ಘಟನೆ ಕಿನ್ನಿಗೋಳಿಯ ಮೀನು ಮಾರುಕಟ್ಟೆಯಲ್ಲಿ ನಡೆದಿದೆ.
ಕಿನ್ನಿಗೋಳಿಯ ಮೀನು ಮಾರು ಕಟ್ಟೆಯಲ್ಲಿ ಹಸಿ ಮೀನು ಮಾರಾಟ ವನ್ನು ಮಾಡುತ್ತಿರುವ ಗೀತಾ, ಆಶಾ ಮತ್ತು ಒಣ ಮೀನು ಮಾರಾಟದ ಹೆಜಮಾಡಿ ನಿವಾಸಿ ಶಾರದಾ ಅವರು ಮಾರುಕಟ್ಟೆಯಲ್ಲಿ ಒಣ ಮೀನು ಮಾರಾಟವನ್ನು ಮಾಡುತ್ತಿರುವ ಕೆ.ಎಸ್. ರಾವ್ ನಗರದ ನಿವಾಸಿ ಶಾರದಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಮೂಲ್ಕಿ ಪೊಲೀಸರಿಗೆ ಶಾರದಾ ಅವರು ದೂರು ನೀಡಿದ್ದಾರೆ.
ಆರೋಪಿಗಳ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.