ಬಂಟ್ವಾಳ, ಮೇ. 15(DaijiworldNews/AK): ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಲಾರಿ-ಮಿನಿ ಬಸ್-ಕಾರಿನ ಮಧ್ಯೆ ಢಿಕ್ಕಿ ಸರಣಿ ಅಪಘಾತದಿಂದ ವಾಹನಗಳು ಜಖಂಗೊಂಡ ಘಟನೆ ಬುಧವಾರ ನಡೆದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.
ಮಂಗಳೂರು ಕಡೆಯಿಂದ ಕಬ್ಬಿಣದ ಸರಕನ್ನು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಸೊತ್ತುಗಳನ್ನು ಹಿಂಬದಿಯಲ್ಲಿ ವ್ಯಾಪ್ತಿ ಮೀರಿ ತುಂಬಿಲಾಗಿದ್ದು, ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಮಿನಿ ಬಸ್ ವ್ಯಾಪ್ತಿ ಮೀರಿ ತುಂಬಿದ್ದ ಕಬ್ಬಿಣದ ಸೊತ್ತಗಳಿಗೆ ಢಿಕ್ಕಿಯಾಗಿ ಅದರ ಗಾಜು ಒಡೆದಿದೆ.
ಹಿಂಬದಿಯಲ್ಲಿ ಢಿಕ್ಕಿಯಾದ ಪರಿಣಾಮ ಲಾರಿ ಮುಂದಕ್ಕೆ ಚಲಿಸಿ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಿನಿ ಬಸ್, ಕಾರಿಗೆ ಹೆಚ್ಚಿನ ಹಾನಿಯಾಗಿದ್ದು, ಲಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ಈ ಘಟನೆಯಿಂದ ಬಿ.ಸಿ.ರೋಡಿನಲ್ಲಿ ಕೆಲ ಸಮಯದ ವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು, ಬಳಿಕ ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.