ಕುಂದಾಪುರ, ಮೇ. 14(DaijiworldNews/AK): ಮಂಗಳವಾರ ಸಂಜೆ ಬೀಸಿದ ಸುಂಟರಗಾಳಿಗೆ ಹೊಸಂಗಡಿ ಗ್ರಾಮದ ಪ್ರೇಮ ಆಚಾರಿ ಎಂಬುವರ ವಾಸದ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ.
ಸಂಜೆ ಸುಮಾರು 4 ಗಂಟೆಗೆ ಇದ್ದಕ್ಕಿದ್ದಂತೆ ಬಿರುಗಾಳಿ ಹಾಗೂ ಸಿಡಿಲಿ ಬಡಿದಿದೆ. ಮೇಲ್ಛಾವಣಿ ಹಾರಿ ಹೋದ ಪರಿಣಾಮ ಸುಮಾರು 50 ಸಾವಿರ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸುಂಟರಗಾಳಿ ಸಂದರ್ಭ ಮನೆಯಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.