ಕಾಸರಗೋಡು, ಮೇ. 14(DaijiworldNews/AK): ಬೈಕ್ ನಲ್ಲಿ ಬಂದು ಕೃಷಿಕ ರೋರ್ವರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಟ್ವಾಳ ಬಿ. ಸಿ ರೋಡ್ ಶಾಂತಿಯಂಗಡಿಯ ಮುಹಮ್ಮದಾಲಿ ಯಾನೆ ಅಝರ್ ( 33) ಬಂಧಿತ ಆರೋಪಿ . ಇನ್ನೋರ್ವ ಆರೋಪಿ ಉಳ್ಳಾಲ ಮೂಲದ ಮುಹಮ್ಮದ್ ಸುಹೈಲ್ ನನ್ನು ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿತ್ತು .ಕುಂಬಳೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಶಾಂತಿಯಂಗಡಿಯ ಮನೆಯಿಂದ ಅಝರ್ ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕುಂಬಳೆ , ಬದಿಯಡ್ಕ , ನೀಲೇಶ್ವರ ಹಾಗೂ ಇನ್ನಿತರ ಕಡೆಗಳಲ್ಲಿ ಸರ ಕಸಿದ , ಕಳವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ ೨೭ ರಂದು ಪೈವಳಿಕೆ- ಚೇವಾರ್ ರಸ್ತೆಯ ಕಟ್ಟದಮನೆ ಯ ಗೋಪಾಲ ಕೃಷ್ಣ ಭಟ್ ರವರ ಕತ್ತಿನಿಂದ ಎರಡೂವರೆ ಪವನ್ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಸಿದು ಪರಾರಿ ಯಾಗಿದ್ದರು. ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು.
ಪೈವಳಿಕೆ ಕಟ್ಟದಮನೆಯ ಗೋಪಾಲಕೃಷ್ಣ ಭಟ್ ರವರ ಕುತ್ತಿಗೆಯಿಂದ ಹಾಡಹಗಲೇ ಎರಡೂವರೆ ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಏಪ್ರಿಲ್ ೨೭ ರಂದು ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಗೋಪಾಲಕೃಷ್ಣ ಭಟ್ ರವರ ಕುತ್ತಿಗೆಯಿಂದ ಸರವನ್ನು ಬೈಕ್ ನಲ್ಲಿ ಬಂದಿದ್ದ ಸುಹೈಲ್ ಹಾಗೂ ಇನ್ನೋರ್ವ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಸಿಸಿಟಿವಿ ದ್ರಶ್ಯ ವನ್ನು ಕಲೆ ಹಾಕಿದ್ದ ಪೊಲೀಸರು ಆರೋಪಿಗಳಿಗಾಗಿ ತನಿಖೆ ನಡೆಸಿದ್ದರು . ಈ ನಡುವೆ ವಯನಾಡಿನ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಈತ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ .
ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈತನ ವಿರುದ್ಧ ಬದಿಯಡ್ಕ , ಕುಂಬಳೆ , ವಿದ್ಯಾನಗರ , ಕಾಸರಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಲ್ಲಿ ಶಾಮೀಲಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು , ಈ ಬಗ್ಗೆ ತನಿಖೆ ನಡೆಯುತ್ತಿದೆ . ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅನ್ಸಾರ್ , ಹಾಗೂ ದಿನೇಶ್ , ಆರಿಫ್ , ಶ್ರೀನೇಶ್ ನೇತೃತ್ವ ನೀಡಿದ್ದರು