ಉಡುಪಿ ನ 21: ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರು ಇಂದು ಕೊಲ್ಲೂರಿಗೆ ಆಗಮಿಸಿ ಶತಚಂಡಿಯಾಗದ ಪೂರ್ಣಾಹುತಿಯಲ್ಲಿ ಪಾಳ್ಗೊಳ್ಳಲಿದ್ದಾರೆ.ಪ್ರಧಾನಿ ಸಿಂಘೆ ಅವರ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 3 ರ ವರೆಗೆ ದೇಗುಲದಲ್ಲಿ ಭಕ್ತರ ದರ್ಶನಕ್ಕೆ ನಿರ್ಭಂಧ ಹೇರಲಾಗಿದೆ.ಭದ್ರತೆ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ..ಶ್ರೀಲಂಕಾ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಶೇಷ ಭದ್ರತಾ ಪಡೆಗಳು ಕೊಲ್ಲೂರಿಗೆ ಆಗಮಿಸಿದ್ದು ಅರೆಶಿರೂರಿನ ಹೆಲಿಪ್ಯಾಡ್ ಸಮೇತ ವಿವಿಧ ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿವೆ.ಈ ಹಿಂದೆಯೇ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ಆಗಮಿಸಬೇಕಿತ್ತಾದರೂ ಹವಾಮಾನ ವೈಪರೀತ್ಯದಿಂದ ಕಾರ್ಯಕ್ರಮ ರದ್ದುಗೊಂಡಿತ್ತು.